ಗೊಂಡಾ(ನ.12): ಬುಧವಾರವಷ್ಟೇ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿದ್ದ ಅಂಡರ್-23 ವಿಶ್ವ ಚಾಂಪಿಯನ್ ಕಂಚು ವಿಜೇತೆ ನಿಶಾ ದಹಿಯಾ ಗುರುವಾರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನ ಜಯಿಸಿದ್ದಾರೆ.
ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್ನಲ್ಲಿ ನಿಶಾ, ಪಂಜಾಬ್ನ ಜಸ್ಪ್ರೀತ್ ಕೌರ್ರನ್ನು ಕೇವಲ 30 ಸೆಕೆಂಡ್ಗಳಲ್ಲಿ ಮಣಿಸಿ ಚಿನ್ನ ಗೆದ್ದುಕೊಂಡರು. ಇದರೊಂದಿಗೆ ನಿಶಾ ದಹಿಯಾ ಸತತ ಎರಡನೇ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನಿಶಾ, ‘ಹತ್ಯೆ ವದಂತಿ ಬಳಿಕ ನಾನು ತುಂಬಾ ಒತ್ತಡದಲ್ಲಿದೆ. ನಿದ್ರಿಸಲೂ ಸಾಧ್ಯವಾಗಲಿಲ್ಲ. ಆದರೆ ಚಾಂಪಿಯನ್ಶಿಪ್ ಅಭಿಯಾನ ಉತ್ತಮ ಹಾಗೂ ಸಂತೋಷದಿಂದ ಮುಕ್ತಾಯಗೊಂಡಿದೆ’ ಎಂದಿದ್ದಾರೆ.
ಸರ್ಬಿಯಾದ ಬೆಲ್ಗ್ರೇಡ್ನಲ್ಲಿ ನವೆಂಬರ್ 05ರಂದು ನಡೆದ ಅಂಡರ್-23 ವಿಶ್ವ ಚಾಂಪಿಯನ್ ಕ್ರೀಡಾಕೂಟದಲ್ಲಿ 72 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ನಿಶಾ ದಹಿಯಾ ಕಂಚಿನ ಪದಕ ಜಯಿಸಿದ್ದರು. ಇದರ ಬೆನ್ನಲ್ಲೇ ಅಂಡರ್-23 ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಕುಸ್ತಿಪಟುಗಳನ್ನು ಅಭಿನಂದಿಸಿದ್ದರು.