News Karnataka Kannada
Tuesday, May 07 2024
ಮೈಸೂರು

ದಸರಾ ವಿದ್ಯುತ್ ದೀಪಾಲಂಕಾರದ ಸಮಯ ವಿಸ್ತರಣೆಗೆ ಅಡ್ಡಿಯಾದ ನೈಟ್ ಕರ್ಫ್ಯೂ

Dasara
Photo Credit :

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ವಿದ್ಯುತ್ ದೀಪಾಲಂಕಾರದ ಸಮಯವನ್ನು ಮತ್ತೆ ಬದಲಾಯಿಸಲಾಗಿದೆ. ಇದಕ್ಕೆ ಕೊರೋನಾ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿರುವ ರಾತ್ರಿ ಕರ್ಫ್ಯೂ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರವನ್ನು ಈ ಬಾರಿ 108 ಕಿ.ಮೀ ದೂರದ ತನಕ ಚೆಸ್ಕಾಂನವರು ಬಹಳ ಆಕರ್ಷಕವಾಗಿ ಮಾಡಿದ್ದಾರೆ.

ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಂಜೆ 6 ರಿಂದ 9.30ರ ತನಕ ಮಾತ್ರ ದೀಪಾಲಂಕಾರವನ್ನು ನೋಡಬಹುದಾಗಿತ್ತು. ಆದರೆ ಈ ದೀಪಾಲಂಕಾರವನ್ನು ನೋಡಿ ಕಣ್ತುಂಬಿಕೊಳ್ಳುವುದಕ್ಕೆಂದು ನಿಗದಿಪಡಿಸಲಾಗಿದ್ದ ಸಮಯವನ್ನು ವಿಸ್ತರಿಸಬೇಕೆಂದು ಬೇಡಿಕೆ ಸಾರ್ವಜನಿಕರಿಂದ ಬರುತ್ತಿದ್ದವು.

ಈ ಹಿನ್ನಲೆಯಲ್ಲಿ ಶನಿವಾರ ದೀಪಾಲಂಕಾರ ಸಮಯವನ್ನು ವಿಸ್ತರಿಸಿ ನಿಗದಿಪಡಿಸಲಾಗಿತ್ತು. ಪ್ರತಿದಿನ ಸಂಜೆ 6.30ರಿಂದ 10.30ರವರೆಗೆ ಹಾಗೂ ಆಯುಧಪೂಜೆ ಮತ್ತು ವಿಜಯದಶಮಿ ದಿನದಂದು ರಾತ್ರಿ 11 ಗಂಟೆವರೆಗೆ ದೀಪಾಲಂಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೈಸೂರಿನಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಕರ್ಫ್ಯೂ ಜಾರಿಯಲ್ಲಿಟ್ಟಿರುವುದನ್ನು ಪೊಲೀಸ್ ಅಧಿಕಾರಿಗಳು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದರು. ಹೀಗಾಗಿ ಈಗ ಮತ್ತೆ ದೀಪಾಲಂಕಾರದ ಸಮಯದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.

ಪ್ರತಿದಿನ ರಾತ್ರಿ 10 ಗಂಟೆವರೆಗೂ ಮಾತ್ರ ಪ್ರಮುಖ, ರಸ್ತೆ ವೃತ್ತಗಳಲ್ಲಿ ದೀಪಾಲಂಕಾರ ಕಂಗೊಳಿಸಲಿದೆ. ನಿತ್ಯ ಸಂಜೆ 6.30 ರಿಂದ 10 ಗಂಟೆಯವರೆಗೂ ದೀಪಾಲಂಕಾರ ಕಣ್ತುಂಬಿಕೊಳ್ಳಬಹುದು. ಆಯುಧ ಪೂಜೆ ಹಾಗೂ ವಿಜಯದಶಮಿ ದಿನವೂ ಇದೇ ಸಮಯ ನಿಗದಿಪಡಿಸಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು