ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎನ್‌ಸಿಸಿ ಆರ್ಮಿ ವಿಂಗ್‌ನ ಎಸ್‌ಯುಒ ಶ್ಲೋಕ್ ಸನಿಲ್‍ರವರು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಡಿಡಿಜಿಯ ಗೌರವಾನ್ವಿತ ಉಪಸ್ಥಿತಿಯಲ್ಲಿ ಭಾರತದ ಘನತೆವೆತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಂದ ಪ್ರತಿಷ್ಠಿತ ಆರ್‌ಡಿಸಿ ಚಾಂಪಿಯನ್‌ಶಿಪ್ ಟ್ರೋಫಿ 2026 ಅನ್ನು ಪಡೆದರು.

ಅವರು ಮಂಗಳೂರಿನ 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿದ್ದು, ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಇದು ಸಂತ ಅಲೋಶಿಯಸ್ ಎನ್‌ಸಿಸಿ ಆರ್ಮಿ ವಿಂಗ್‌ಗೆ ಅಪಾರ ಹೆಮ್ಮೆಯ ಕ್ಷಣವಾಗಿದ್ದು, ಶಿಸ್ತು, ಸಮರ್ಪಣೆ ಹಾಗೂ ಶ್ರೇಷ್ಠತೆಯ ನಿಜವಾದ ಪ್ರತಿಬಿಂಬವಾಗಿದೆ. ಅಲ್ಲದೆ, ಎಸ್‌ಯುಒ ಶ್ಲೋಕ್ ಅವರ ಈ ಸಾಧನೆಯು ಪ್ರತಿಯೊಬ್ಬ ಕೆಡೆಟ್‌ಗೂ ಉನ್ನತ ಗುರಿ ಸಾಧಿಸಲು ಮತ್ತು ಸೇನಾ ವಿಭಾಗದ ಅದ್ಭುತ ಗುಣಮಟ್ಟವನ್ನು ಎತ್ತಿಹಿಡಿಯಲು ಸ್ಫೂರ್ತಿ ನೀಡುತ್ತದೆ.

ಎಸ್‌ಯುಒ ಶ್ಲೋಕ್ ಅವರು ಮಂಗಳೂರಿನ ಮರೋಳಿಯ ಶ್ರೀ ದಿವಾಕರ್ ಸನಿಲ್ ಮತ್ತು ಶರ್ಮಿಳಾ ಸನಿಲ್ ಅವರ ಹೆಮ್ಮೆಯ ಪುತ್ರ.. ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ, 18 ಕೆಎಆರ್ ಬಿಎನ್ ಎನ್‌ಸಿಸಿ ಮಂಗಳೂರು ಗ್ರೂಪ್‌ನ ಕಮಾಂಡಿಂಗ್ ಆಫೀಸರ್ ಲೆ| ಕ| ರೋಹಿತ್ ಪ್ರಕಾಶ್ ರೈ, ಎನ್‌ಸಿಸಿ ಆರ್ಮಿ ವಿಂಗ್‌ನ ಎಎನ್‌ಒ ಕ್ಯಾಪ್ಟನ್ ಶಕಿನ್‌ರಾಜ್, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಎಸ್‌ಯುಒ ಶ್ಲೋಕ್ ಸನಿಲ್ ಅವರ ಗಮನಾರ್ಹ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ.