ಮಂಗಳೂರು: ದಸರಾ ರಜೆ ವಿವಾದಕ್ಕೆ ಸಂಬಂಧಿಸಿದಂತೆ NSUI ಮುಖಂಡ ಸುಹಾನ್ ಪತ್ರಿಕಾಗೋಷ್ಠಿಯಲ್ಲಿ ABVP ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆನರಾ ಕಾಲೇಜು ಹಾಗೂ ಶಕ್ತಿ ಕಾಲೇಜಿನಲ್ಲಿ ಪರೀಕ್ಷೆಗಳು ನಡೆದಾಗ ABVP ಪ್ರತಿಭಟನೆ ನಡೆಸದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ರಜೆ ಕುರಿತು ಸಂದೇಶ ಬಂದಿದ್ದರೂ ಕೆನರಾ ಕಾಲೇಜಿಗೆ ಮುತ್ತಿಗೆ ಹಾಕದಿರುವುದನ್ನು ಪ್ರಸ್ತಾಪಿಸಿದ್ದಾರೆ.

ಸೇಂಟ್ ಆಗ್ನೆಸ್ ಕಾಲೇಜು ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಆ ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಸುಹಾನ್ ಆರೋಪಿಸಿದ್ದಾರೆ. ದಸರಾ ರಜೆ ಕೇಳುವುದು ವಿದ್ಯಾರ್ಥಿಗಳ ಹಕ್ಕು ಎಂದು ಪ್ರತಿಪಾದಿಸಿದ ಅವರು, ABVP ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

View this post on Instagram

A post shared by News Karnataka (@newskarnataka)