ಮಂಗಳೂರು : ತಪ್ಪು ಯಾರು ಮಾಡಿದರೂ ನಾವು ಮಾತಾಡ್ತೇವೆ. ವಿದ್ಯಾರ್ಥಿಗಳು ಯಾವ ಕಾಲೇಜು ವಿರುದ್ಧ ಪ್ರತಿಭಟನೆ ಮಾಡಿದ್ದಾರೆಯೋ ಅದರ ವಿರುದ್ಧ ಮಾತಾಡುತ್ತೇವೆ. ಕೆನರಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರೂ, ನನ್ನಪ್ಪನ ಕಾಲೇಜು ಆಗಿದ್ದರೂ ನಾವು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದೆ. ಆ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತಿದ್ದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರತಿಪಾದಿಸಿದ್ದಾರೆ.

ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭ ನಾವು ಉಸ್ತುವಾರಿ ಸಚಿವರು, ವಿದಾನಪರಿಷತ್ ಸದಸ್ಯ ಐವನ್ ಡಿ’ಸೋಜ ಅವರಿಗೆ ಕರೆ ಮಾಡಿದ್ದೆವು, ನಂತರ ‘ಭಾರತ್ ಮಾತಾಕೀ ಜೈ’ ಎನ್ನುವ ವಿದ್ಯಾರ್ಥಿ ಸಹಿತ ಇತರರ ಮೇಲೆ ಹಲ್ಲೆ ನಡೆಯುವುದಾದರೆ ಅದಕ್ಕೆ ಉಸ್ತುವಾರಿ ಸಚಿವ ಮತ್ತು ಐವನ್ ಡಿ’ಸೋಜ ಅವರೇ ಕಾರಣ, ಅವರೇ ಹೇಳಿ ಹೊಡೆಸಿದ್ದಾರೆ‌ಂದು ಕಾಮತ್ ಗಂಭೀರ ಆರೋಪ ಮಾಡಿದ್ದಾರೆ. ‌

View this post on Instagram

A post shared by News Karnataka (@newskarnataka)