ಮಂಗಳೂರು : ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಂಗಳೂರಿನಲ್ಲಿ ಮಾಜಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಬಿಜೆಪಿ ಹೋಗುವ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ. ಒಂದಂತು ೨೦೨೮ ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡ್ತೇನೆ ಎಂದರು.
ಯಾವುದು ಅಂತ ನಿರ್ಧಾರ ಆಗಿಲ್ಲ ಬಿಜೆಪಿ ಯವರು ಕರಿತಾರೆ ಅಂತ ಕಾಯ್ತಿದ್ದೇನೆ. ಕಾಂಗ್ರೆಸ್ ಹೋಗೋದು ಇನ್ನು ನಿಶ್ಚಯ ಆಗಿಲ್ಲ. ಕಾಂಗ್ರೆಸ್ ನಿಂದ ಈಗಾಗಲೇ ಬುಲಾವ್ ಬಂದಿದ್ದು, ನಾನು ಯೋಚನೆ ಮಾಡ್ತ್ಗ ಇದ್ದೇನೆ ನನ್ನ ಬೆಂಬಲಿಗರು ಎಲ್ಲರಿಂದ ಕೇಳ್ಬೇಕು, ಬಿಜೆಪಿ ಬಂದ್ರೆ ಯೋಚನೆ ಮಾಡಬಹುದು. ಬಾಲ್ಯದಿಂದ ಸ್ವಯಂ ಸೇವಕನಾಗಿ ಓಟಿಸಿ ಆದ ಸ್ವಯಂ ಸೇವಕ . ಮೂರು ಭಾರೀ ಶಾಸಕನಾದವನು ಬಿಜೆಪಿ ಯುವ ಮೋರ್ಚಾ ಜಿಲ್ಲಾ, ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದವ ಎಂದರು.
ಏಕ ಏಕಿ ನಿರ್ಧಾರ ತೆಗೆಯಲು ಸಾಧ್ಯ ವಿಲ್ಲಾ ನನ್ನ ಮನಸ್ಥಿತಿ ಒಪ್ಪೋದಿಲ್ಲ. ನಮ್ಮ ಬೆಂಬಲಿಗರ ವಿಶ್ವಾಸ ತೆಗೆದುಕೊಂಡು ಯಾವುದೇ ನಿರ್ಧಾರ ತೆಗಿತೇನೆ. ನನಗೆ ಈ ಹಿಂದಿನ ಚುನಾವಣೆಯಲ್ಲಿ ಆದ ಅನ್ಯಾಯ. ವಿಧಾನ ಸಭೆಯಲ್ಲಿ ನನಗೆ ಶೀಟ್ ತಪಿದ್ದು ಅನ್ಯಾಯ ಅಲ್ಲ ಅದರಲ್ಲಿ ನಾನು ಕೆಲಸ ಮಾಡಿದ್ದೇನೆ. ವಿಧಾನ ಪರಿಷತ್ ನಲ್ಲಿ ಸೀಟ್ ಕೊಡ್ತ್ಗೇನೆ ಹೇಳಿ ಸೀಟ್ ಕೊಡದೆ ಅಲ್ಲಿ ಮೋಸ ಮಾಡಿ. ನನ್ನ ಮೇಲೆ ನಾವೇ ಮಾಡಿದ ಶಾಸಕರು ಮಾಡುವ ವೈಯಕ್ತಿಕ ದಬ್ಬಾಳಿಕೆ ಎಂದರು.
ಇದಕ್ಕೆ ಉದ್ದೇಶಿಸಿ ಯಾರು ಹಿರಿಯರು ಸಂಘದವರು ಬಿಜೆಪಿ ಯವರು ಮಾತನಾಡೆ ಇರುದು ಮನಸಿಗೆ ನೋವಿದೆ. ನಮ್ಮ ಹತ್ತಿರದ ಎಲ್ಲಾ ಕ್ಷೇತ್ರದ ಮಾಜಿ ಗಳಿಗೆ ಗೌರವದಲ್ಲಿ ನೋಡ್ಕೊಳ್ತಾರೆ. ನನಗೆ ಗೌರವ ಬೇಡ ಬಹುವಚನದಲ್ಲಿ ಮಾತನಾಡಿದ್ರು ಸಾಕಾಗ್ತ ಇತ್ತು. ಈ ವಿಚಾರ ನನಗೆ ಮಾನಸಿಕ ಆಘಾತ ಆಗಿದೆ. ಅದಕ್ಕಾಗಿ ಚುನಾವಣೆ ನಿಲ್ತೇನೆ ಮೂರುಬಾರಿ ಶಾಸಕ ಆಗಿದ್ದೇನೆ ಜನ ನನ್ನ ಪರ ನಿಲ್ತಾರ ಇಲ್ವಾ, ಕ್ಷೇತ್ರದ ಜನ ನನ್ನನ್ನು ಸೋಲಿಸಿಲ್ಲ ವಿಧಾನ ಸಭೆಯಲ್ಲಿ ನೋಡುವ ಜನ ಏನ್ ಹೇಳ್ತಾರೆ ಅಂತಾ ಎಂದರು.
ಜನ ಬೇಡ ನೀನು ಕುತ್ಕೊ ಅಂತ ಹೇಳಿದ್ರೆ ಮನೆಯಲ್ಲಿ ಕೂತುಕೊಳ್ತೇನೆ ನಾನು. ಚುನಾವಣಾ ರಾಜಕೀಯ ಬಿಟ್ಟು ಜನರಿಗೆ ಸಹಾಯ ಮಾಡುವಂತದ್ದು, ಜನರ ಕೆಲಸ ಮಾಡಲಿಕ್ಕೆ ಜನಪ್ರತಿನಿಧಿ ಆಗಬೇಕಿಲ್ಲ. ಜನರು ಹೇಳ್ತಾರೆ ನಿಮ್ಮನ್ನು ನಾವು ಸೋಲಿಸಿಲ್ಲ ನಿಮ್ಮ ಪಕ್ಷ ಸೀಟ್ ತಪ್ಪಿಸಿದ್ದು ನೀವು ನಿಲ್ಲಿ ಹೇಳ್ತಾರೆ ಎಂದರು.

