Bengaluru 22°C
Ad

ನಡುರಸ್ತೆಯಲ್ಲಿ ನಮಾಜ್ ಪ್ರಕರಣ : ಸರಕಾರದ ವಿರುದ್ಧ ಕಟೀಲ್ ಆಕ್ರೋಶ

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ಪರಿಷತ್ ಚುನಾವಣೆಯಲ್ಲಿ ನಮಗೆ ಶಕ್ತಿ ತುಂಬಿರುವ ಕ್ಷೇತ್ರ. ನಮಗೆ ವಿಶ್ವಾಸ ಇದೆ ಎರಡು ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ, ರಘುಪತಿ ಭಟ್ ಬಂಡಾಯ ವಿಚಾರ ಚುನಾವಣೆಯಿಂದ ಚುನಾವಣೆಗೆ ಬಂಡಾಯ ಸಾಮಾನ್ಯ.ಜನ ಬಂಡಾಯಕ್ಕೆ ಹೆಚ್ಚು ಒತ್ತು ನೀಡೋದಿಲ್ಲ, ಬಿಜೆಪಿಗೆ ಒತ್ತು ನೀಡುತ್ತಾರೆ ಎಂದರು.

ಮಂಗಳೂರು:  ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ಪರಿಷತ್ ಚುನಾವಣೆಯಲ್ಲಿ ನಮಗೆ ಶಕ್ತಿ ತುಂಬಿರುವ ಕ್ಷೇತ್ರ. ನಮಗೆ ವಿಶ್ವಾಸ ಇದೆ ಎರಡು ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ, ರಘುಪತಿ ಭಟ್ ಬಂಡಾಯ ವಿಚಾರ ಚುನಾವಣೆಯಿಂದ ಚುನಾವಣೆಗೆ ಬಂಡಾಯ ಸಾಮಾನ್ಯ.ಜನ ಬಂಡಾಯಕ್ಕೆ ಹೆಚ್ಚು ಒತ್ತು ನೀಡೋದಿಲ್ಲ, ಬಿಜೆಪಿಗೆ ಒತ್ತು ನೀಡುತ್ತಾರೆ ಎಂದರು.

ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಪ್ರಭಾವ ಬೀರೋದಿಲ್ಲ, ಭೋಜೆಗೌಡರು ವಿಧಾನಸಭಾ ಚುನಾವಣೆಯಲ್ಲಿ ನಮ್ಮ NDA ಭಾಗವಾಗಿರಲಿಲ್ಲ, ವಿಧಾನ ಸಭೆಯ ಚುನಾವಣೆ ಬಳಿಕ ಎನ್ ಡಿ ಎ ಭಾಗವಾಗಿದ್ದಾರೆ. ಸರ್ಜಿಯವರು ನಿರಂತರ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿದವರು. ನಮ್ಮ ಪಾರ್ಟಿಯವರು ಎಲ್ಲಾ ಯೋಚನೆಗಳನ್ನ ಮಾಡಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎರಡು ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದರು.

ನಮಾಜ್ ಮಾಡಿದವರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಹಿಂದಕ್ಕೆ ಪಡೆದ್ರು ತುಷ್ಠಿಕರಣದ ನೀತಿಯಿಂದ ಕೇಸ್ ಹಿಂಪಡೆಯಲಾಗಿದೆ, ಕೇಸ್ ಹಾಕಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಾರೆ .ಹಿಂದು ಮುಖಂಡ ಶರಣ್ ಪಂಪ್ ವೆಲ್ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಸರಕಾರ ಹಿಂದು ವಿರೋಧಿ ನೀತಿ ಪಾಲಿಸುತ್ತಿದೆ. ಹೇಳಿಕೆ ಕೊಟ್ಟವರ ಮೇಲೆ ಕೇಸ್ ಹಾಕಿದ್ರಿ,ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಈ ರೀತಿಯ ಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ನಮಾಜ್ ಪ್ರಕರಣ ಸರಕಾರದ ವಿರುದ್ಧ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಣ್ಣ ಸರಕಾರ ಬಂದ ಮೇಲೆ ಹುಬ್ಬಳ್ಳಿ ಘಟನೆ, ಹತ್ಯೆಗಳು ನಡೆಯುತ್ತಿದೆ
ಕಾಂಗ್ರೆಸ್ ಸರಕಾರ ಕೊಟ್ಟಿರುವ ಬೆಂಬಲದಿಂದ ಹೀಗಾಗಿದೆ, ಶಾಂತಿ ಕಾಪಾಡಲು ವಿಫಲವಾಗಿದೆ, ಗುಂಡಾ ರಾಜಕಾರಣ ಹೆಚ್ಚಾಗಿದೆ. ಇವತ್ತು ನಾನು ಸಾಮಾನ್ಯ ಕಾರ್ಯಕರ್ತ ಸಾಯುವ ವರೆಗೂ ಸಾಮಾನ್ಯ ಕಾರ್ಯಕರ್ತನಾಗಿರೋದು ಅದ್ಕಕಿಂತ ಬೇರೆ ಏನು ಬೇಡ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಪ್ರಾಣಿ ಬಲಿ ಸಹಿತ ಶತ್ರು ಸಂಹಾರಯಾಗ ಆರೋಪ ವಿಚಾರ
ಕೇರಳ ಸರಕಾರ ಸಚಿವರು ವಿವರಣೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಸುಳ್ಳು ಹೇಳಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನ ಪಡುತ್ತಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಸುಳ್ಳು ಹೇಳಿ ಜನರ ಹಾದಿ ತಪ್ಪಿಸಲು ಯತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad