ಮಂಗಳೂರು: ಮಾನ್ಯ ಆರೋಗ್ಯ ಸಚಿವ ರಾದ ಶ್ರೀಯುತ ಯು ಟಿ ಖಾದರ್ ರವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಇವರ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿ ಮೀನು ಸಂರಕ್ಷಿಸಿಡಲು ಬಳಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಪರಿಶೀಲನ ಭೇಟಿ ನಡೆಸಲಾಯಿತು.

ಮಂಗಳೂರಿನ ಬಂದರು ಧಕ್ಕೆಯಲ್ಲಿ ಇರುವ ಮಂಜುಗಡ್ಡೆ ತಯಾರಿಕಾ ಘಟಕಗಳಿಂದ ಮಂಜುಗಡ್ಡೆಯ ಮಾದರಿಯನ್ನು ಸಂಗ್ರಹಿಸಲಾಯಿತು ಈ ಘಟಕಗಳಲ್ಲಿ ನೀರಿನ ಟ್ಯಾಂಕರ್ ಗಳ ಮುಖಾಂತರ ಸಿಹಿ ನೀರನ್ನು ಖರೀದಿಸಿ ಮಂಜುಗಡ್ಡೆಯನ್ನು ತಯಾರಿಸಲಾಗುತ್ತಿದೆ.

ಮಂಜುಗುಡ್ಡೆ ತಯಾರಿಸಿದ ಬಳಸಲಾಗುವ ನೀರಿನ ಪ್ರಯೋಗಾಲಯ ವರದಿಗಳನ್ನು ಪಡೆದ ಬಳಿಕವೇ ಮಂಜುಗಡ್ಡೆಯನ್ನು ತಯಾರಿಸಲು ಸೂಚಿಸಲಾಯಿತು. ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಮಂಜುಗಡ್ಡೆ ತಯಾರಿಕಾ ಘಟಕ ನಡೆಸಲಾಗುತ್ತಿದ್ದು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಶುದ್ಧ ಮಂಜುಗಡ್ಡೆಯನ್ನು ತಯಾರಿಸುವುದು ಕಂಡುಬಂದಿರುತ್ತದೆ
ಮಂಜುಗಡ್ಡೆ ತಯಾರಿಸಲು ಬಳಸಲಾಗುವ ನೀರಿನ ಆಹಾರ ಮಾದರಿಯನ್ನು ಸಹ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಉತ್ತಮ ಗುಣಮಟ್ಟದ ಶುಚಿಯಾದ ತಾಜಾ ಮೀನುಗಳ ಸಂರಕ್ಷಣೆಗೆ ಉತ್ತಮ ಗುಣಮಟ್ಟದ ನೀರನ್ನು ಬಳಸಿ ತಯಾರಿಸಿದ ಮಂಜುಗಡ್ಡೆಯನ್ನು ಬಳಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ನಿರ್ದೇಶನ ನೀಡಲಾಯಿತು. ಮೀನಿನ ಸಂರಕ್ಷಣೆಗೆ ಫಾರ್ಮಲಿನ್ ಅಥವಾ ಇನ್ಯಾವುದೇ ರಾಸಾಯನಿಕ ಬಳಸಿದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.