Bengaluru 24°C
Ad

ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲಿ ಹಗರಣ ಆರೋಪ !

Vv

ಮಂಗಳೂರು: ಮಂಗಳೂರು ವಿವಿಯ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆದಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

ಈ ಬಾರಿ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್‌ ನೀಡಲಿದೆ. ವಿವಿಯ ಮುಂದೆ ಬಂದಿರುವ ಒಟ್ಟು 15 ಪ್ರಸ್ತಾಪಗಳಲ್ಲಿ ಎಂಆರ್​ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ – ಮೂವರಿಗೆ ಈ ಗೌರವ ನೀಡಲಾಗುತ್ತಿದೆ.

ಉದ್ಯಮಿಗಳಿಗೆ ಈ ಪದವಿಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಹಾಗಾದರೆ, ಈ ಸಾವಿರ ಕೋಟಿ ವ್ಯವಹಾರಗಳುಲ್ಲ ಮೂವರು ಉದ್ಯಮಿಗಳು ಗೌರವ ಡಾಕ್ಟರೇಟ್ ಗಾಗಿ ಸ್ವತಹ ಅರ್ಜಿ ಸಲ್ಲಿಸಿದರೆ !, ಅಥವಾ ಅವರ ಸ್ಥಳೀಯ ಚಮಚಾ ರಾಜಕಾರಣಿಗಳು ಅರ್ಜಿ ತುಂಬಿದರೆ ? ಅರ್ಜಿ ಸಲ್ಲಿಸಿ ಗೌರವ ಡಾಕ್ಟರೇಟ್ ಪಡೆಯುವ ಅಗತ್ಯ ಸರಕಾರಗಳನ್ನೇ ಕುಣಿಸಬಲ್ಲ ಇಂತಹ ದೊಡ್ಡ ಉದ್ಯಮಿಗಳಿಗೆ ಏನಿತ್ತು? ಕುಲಪತಿ ಧರ್ಮ ಅವರ ಹೇಳಿಕೆ ಈ ಉದ್ಯಮಿಗಳಿಗೆ ದೊಡ್ಡ ಅವಮಾನವಲ್ಲವೆ ? ಸಮಾಜದಲ್ಲಿ ದೊಡ್ಡ ಹೆಸರಿರುವ ಈ ಉದ್ಯಮಿಗಳು ಇಂತಹ ಗೌರವ ಕಳೆದು ಕೊಂಡಿರುವ ಡಾಕ್ಟರೇಟ್ ಅನ್ನು ತಿರಸ್ಕರಿಸಿ ತಮ್ಮ ಗೌರವವನ್ನು ಕಾಪಾಡಿಕೊಳ್ಳಲಿ. ಮಂಗಳೂರು ವಿ ವಿ ಯಾವುದೋ ಖಾಸಗಿ ಫೇಕ್ ವಿ ವಿ ಮಟ್ಟಕ್ಕೆ ಇಳಿದಿರುವುದು ದುಃಖ ಉಂಟು ಮಾಡಿದೆ,” ಎಂದು ಹೇಳಿದ್ದಾರೆ.

Ad
Ad
Nk Channel Final 21 09 2023
Ad