News Karnataka Kannada
Tuesday, May 07 2024
ಶಿವಮೊಗ್ಗ

ಶಿವಮೊಗ್ಗ: ಜಿಲ್ಲೆಯಲ್ಲಿ ನೀರಿಲ್ಲದಂತಹ ಸಂದರ್ಭ ಸೃಷ್ಠಿಯಾಗಿಲ್ಲ – ಮಧು ಬಂಗಾರಪ್ಪ

There is no situation where there is no water in the district: Madhu Bangarappa
Photo Credit : News Kannada

ಶಿವಮೊಗ್ಗ: ಜಿಲ್ಲೆಯಲ್ಲಿ ನೀರಿಲ್ಲದಂತಹ ಸಂದರ್ಭ ಸೃಷ್ಠಿಯಾಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಇರುವ ನೀರು 20 ದಿನಗಳವರೆಗೆ ಆಗುತ್ತದೆ. 20 ದಿನಗಳಲ್ಲಿ ಮಳೆಯಾದರೆ ಅಭಾವ ಕಡಿಮೆಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಮಾಧ್ಯಮದೊಂದಿಗೆ ಮಾತನಾಡಿ ಬೇಗ ಮಳೆ ಬರುವ ವಾತಾವರಣ ಕಾಣಿಸುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎರಡು ಆಗುತ್ತದೆ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ.‌ ಶಿವಮೊಗ್ಗ ಜಿಲ್ಲೆಯಲ್ಲಿ 84 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗ್ತಿದೆ ಎಂದರು.

ಮೋಡ ಬಿತ್ತುವ ಯೋಜನೆಯ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಮಳೆ ಬರದಿದ್ದರೆ ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ಸಂಸದರಿಗೆ ತಿರುಗೇಟು
ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರಾಜ್ಯದಲ್ಲಿ ಬರ ಬರುತ್ತದೆ ಎಂಬ ಸಂಸದ ರಾಘವೇಂದ್ರರ ಹೇಳಿಕೆಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವರು ಗರಂ ಆಗಿ ರಾಜ್ಯದ ಜನರು ಅದಕ್ಕೆ ಅವರಿಗೆ ಬರೆ ಹಾಕಿದ್ದಾರೆ ಎಂದು ಬಿಜೆಪಿ ಸೋಲನ್ನ ಉಲ್ಲೇಖಿಸಿ ಟಾಂಗ್ ನೀಡಿದರು.

10-12 ವರ್ಷದಿಂದ ಬರಿ ವಿಮಾನ ನಿಲ್ದಾಣ ಅಂತಿದ್ದಾರೆ. ಮೊದಲು ವಿಮಾನ ತಂದು ನಿಲ್ಲಿಸಲು ಹೇಳಿ ಅವರಿಗೆ ಎಂದು ತಿರುಗೇಟು ನೀಡಿದರು.

ಶಕ್ತಿ ಯೋಜನೆ ಜಾರಿ ವಿಚಾರ
ಶಕ್ತಿಯೋಜನೆಯಲ್ಲಿ ರೂಲ್ಸ್ ಇರೋದು ಬಸ್ ನಲ್ಲಿ ಮಹಿಳೆಯರಿಗೆ ಫಿಪ್ಟಿ ಪರ್ಸೆಂಟ್ ಅವಕಾಶ ಇರೋದು. ಫಿಫ್ಟಿ ಪರ್ಸೆಂಟ್ ಮಹಿಳೆಯರು ಭರ್ತಿಯಾದರೆ ಪುರುಷರಿಗೆ ಬಿಟ್ಟು ಕೊಡಬೇಕು ಎಂದು. ಆದರೆ ಫ್ರೀ ಎನ್ನುವ ಕಾರಣದಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡ್ತಿದ್ದಾರೆ. ಫ್ರೀ ಸಿಕ್ಕಿದಾಗ ಉಪಯೋಗ ಆಗುವ ರೀತಿ ಓಡಾಡಬೇಕು. ಬಡವರಿಗೆ ಸಹಕಾರ ಆಗಲಿ ಅಂತಾ ಮಾಡಿದ್ದಾರೆ ಎಂದರು.

ಖಾಸಗಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿ ಬಿಜೆಪಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಸಚಿವರು, ಹೌದು ರಾಜ್ಯದಲ್ಲಿ ಕೆಲವರಿಗೆ ಮನೆ ಇಲ್ಲ. ಬಿಜೆಪಿಯವರ ಮನೆಯನ್ನು ಮನೆ ಇಲ್ಲದವರಿಗೆ ಬಿಟ್ಟು ಕೊಡಲು ಹೇಳಿ. ಖಾಸಗಿ ಬಸ್, ಟ್ಯಾಕ್ಸಿ ಅವರಿಗೆ ಸರಕಾರದ ಮಟ್ಟದಲ್ಲಿ ಸ್ಪಂದನೆ ಮಾಡಬೇಕಿದೆ ಎಂದರು.

ಶಿಕ್ಷಕರ ನೇಮಕಾತಿ ವಿಚಾರ
ಶಿಕ್ಷಕರ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಶೀಘ್ರದಲ್ಲೇ ಸರಿಯಾಗುವ ನಿರೀಕ್ಷೆ ಇದೆ. ಈ ಸಮಸ್ಯೆ ಸರಿಯಾಗಿ ನೇಮಕಾತಿ ಆದೇಶ ಕೊಟ್ಟರೆ ಸ್ವಲ್ಪಮಟ್ಟಿಗೆ ಶಿಕ್ಷಕರ ಕೊರತೆ ಕಡಿಮೆ ಆಗ್ತದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು