News Karnataka Kannada
Tuesday, May 07 2024
ಶಿವಮೊಗ್ಗ

ಸಾಗರ: ರಮೇಶ್ ಅವರದು ಸಾಮಾನ್ಯ ಸಾವಲ್ಲ, ದೇಶಕ್ಕಾಗಿ ಆದ ಪ್ರಾಣತ್ಯಾಗ -ಡಿ.ಕೆ. ಶಿವಕುಮಾರ್

D K
Photo Credit : By Author

ಸಾಗರ: ‘ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ಅಪಘಾತದಲ್ಲಿ ಮೃತಪಟ್ಟ ರಮೇಶ್ ಅವರ ಸಾವು ಸಾಮಾನ್ಯವಲ್ಲ. ಅದು ದೇಶಕ್ಕಾಗಿ ಆದ ಪ್ರಾಣತ್ಯಾಗ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

ಹುತ್ತದಿಂಬ ಗ್ರಾಮದಲ್ಲಿನ ರಮೇಶ್ ಅವರ ನಿವಾಸಕ್ಕೆ ಶುಕ್ರವಾರ ತೆರಳಿ, ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

ಬಹಳ ದುಃಖದ ವಿಚಾರವಾಗಿ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹುಟ್ಟಿದವರು ಸಾಯದೇ ಇರಲು ಸಾಧ್ಯವಿಲ್ಲ. ಸಾವು ನಿಶ್ಚಿತ. ಆದರೆ ಬದುಕಿನ ಮಧ್ಯದಲ್ಲಿ ನಾವು ಬಿಟ್ಟು ಹೋಗುವ ಸಾಧನೆಯ ಸಾಕ್ಷಿಗುಡ್ಡೆ ಮುಖ್ಯವಾಗುತ್ತದೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಸಂಘಟನೆ, ಮಾನವಿಯತೆ, ಉಪಕಾರ ಸ್ಮರಣೆಯಿಂದ ಇಲ್ಲಿಗೆ ಬಂದಿದ್ದೇನೆ. ನಾನು ಒಂದು ಕಾಲದಲ್ಲಿ ಬೂತ್ ಅಧ್ಯಕ್ಷನಾಗಿದ್ದೆ. ಈ ಪಂಚಾಯ್ತಿ ವ್ಯಾಪ್ತಿಯ ಬೂತ್ ನ ಅಧ್ಯಕ್ಷರಾಗಿ ರಮೇಶ್ ಅವರು ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಸೇವೆ ಮಾಡಿ ದ್ದಾರೆ.

ಈ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮಾಡುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಪರ ಹಾಗೂ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ರಮೇಶ್ ಅವರು ಮುಂದಾಗಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಆ ಮೂಲಕ ರಮೇಶ್ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಇದು ಬರೀ ಸಾವಲ್ಲ, ದೇಶಕ್ಕಾಗಿ ಮಾಡಿದ ಪ್ರಾಣತ್ಯಾಗ. ದೇಶಕ್ಕಾಗಿ ಮಾಡಿರುವ ಸೇವೆ. ಹೀಗಾಗಿ ಅವರಿಗೆ ನಮನ ಸಲ್ಲಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲು ಪಕ್ಷದ ನಾಯಕರು, ಕಾರ್ಯಕರ್ತರೊಡನೆ ಇಂದು ಇಲ್ಲಿಗೆ ಆಗಮಸಿದ್ದೇವೆ. ನಾವು ಕೂಡ ರಮೇಶ್ ಅವರ ಕುಟುಂಬದವರೇ. ಅವರ ಜತೆ ನಾವಿದ್ದೇವೆ.

ಇದು ಹೋರಾಟಗಾರರ ಭೂಮಿ. ಕಾಗೋಡು ತಿಮ್ಮಪ್ಪನವರು, ಬಂಗಾರಪ್ಪನವರು, ಗೋಪಾಲಗೌಡರು ಇಡೀ ರಾಜ್ಯಕ್ಕೆ ಮಾದರಿ ಹೋರಾಟ ಮಾಡಿದವರು. ನಾನು ಕೂಡ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರ ಶಿಷ್ಯ. ರಮೇಶ್ ಅವರು ಕೂಡ ಇವರ ಶಿಷ್ಯರಾಗಿ ನಮ್ಮ ಜತೆ ಹೆಜ್ಜೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಅವರಿಗೆ ನಮನ ಸಲ್ಲಿಸುತ್ತೇನೆ. ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಧೈರ್ಯವಾಗಿರಬೇಕು.

ಇಲ್ಲಿಗೆ ಆಗಮಿಸುವಾಗ ದಾರಿ ಮಧ್ಯೆ ಹಲವಾರು ಮಂದಿ ನನಗೆ ಸ್ವಾಗತಕೋರಿ ಶಕ್ತಿ ತುಂಬಿದ್ದೀರಿ. ಮಾನವಧರ್ಮ, ಮಾನವೀಯತೆ, ಉಪಕಾರಸ್ಮರಣೆ ಇಟ್ಟುಕೊಳ್ಳದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನಾನು ಇಲ್ಲಿಗೆ ಬರುವಾಗ ಈ ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಇಲ್ಲಿ ಬದಲಾವಣೆ ಅವಶ್ಯಕತೆ ಇದೆ. ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆ ಮಾಡುವ ಸಲುವಾಗಿ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕುತ್ತಿದ್ದಾರೆ.

ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ನಿಯಂತ್ರಿಸಿಕೊಳ್ಳಬೇಕಾದರೆ ನಿನ್ನ ಮೆದುಳನ್ನು ಬಳಸು, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿನ್ನ ಹೃದಯವನ್ನು ಬಳಸು ಎಂದು. ಅದೇ ರೀತಿ ರಾಹುಲ್ ಗಾಂಧಿ ಅವರು ದೇಶದುದ್ದಗಲಕ್ಕೂ ಜನರ ಹೃದಯ ಗೆಲ್ಲಲು ಮುಂದಾಗಿದ್ದಾರೆ. ನಿಮ್ಮ ಸಹಕಾರ ಸದಾ ಹೀಗೇ ಇರಲಿ.

ರಮೇಶ್ ಅವರ ಧರ್ಮಪತ್ನಿ ಜಯಮ್ಮ ಅವರಿಗೆ ಈ ಸಂದರ್ಭದಲ್ಲಿ ನಾವು ಧೈರ್ಯ ತುಂಬಲು ಬಯಸುತ್ತೇವೆ. ರಾಹುಲ್ ಗಾಂಧಿ ಅವರು ಕೂಡ ನಿಮಗೆ ಶಕ್ತಿ ತುಂಬಲು ಹೇಳಿದ್ದಾರೆ. ಹೀಗಾಗಿ ನಾವು ಅವರಿಗೆ 10 ಲಕ್ಷ ರು. ಪರಿಹಾರದ ಚೆಕ್ ನೀಡುತ್ತಿದ್ದೇವೆ. ಇದು ಈ ಕುಟುಂಬಕ್ಕೆ ನಮ್ಮ ಸಣ್ಣ ಸೇವೆ.

ಮಾಧ್ಯಮ ಪ್ರತಿಕ್ರಿಯೆ:

ನಾವು ಇಂದು ರಮೇಶ್ ಅವರ ಧರ್ಮಪತ್ನಿ ಹಾಗೂ ಅವರ ಮಕ್ಕಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇವೆ. ಅವರ ಪರವಾಗಿ ಇಡೀ ಕಾಂಗ್ರೆಸ್ ಕುಟುಂಬ ನಿಲ್ಲಲಿದೆ ಎಂಬ ಭರವಸೆ ನೀಡಿದ್ದೇವೆ. ರಮೇಶ್ ಅಪಘಾತದಲ್ಲಿ ಮೃತಪಟ್ಟಿದ್ದರೂ ಇದು ದೇಶಕ್ಕಾಗಿ ಅವರು ಮಾಡಿದ ಪ್ರಾಣತ್ಯಾಗ ಆಗಿದೆ.

ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿಯ ಟೀಕೆ ಕುರಿತು ಕೇಳಿದ ಪ್ರಶ್ನೆಗೆ, ‘ಅಸೂಯೆಗೆ ಮದ್ದಿಲ್ಲ. ಅವರು ಇಂತಹ ಸಾಹಸಕ್ಕೆ ಎಂದಾದರೂ ಮುಂದಾಗಿದ್ದಾರಾ? ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರಾ? ಸ್ವಾತಂತ್ರ್ಯ, ಸಂವಿಧಾನ ತಂದಿದ್ದಾರಾ? ಬಡವರಿಗೆ ಜಮೀನು, ಸೈಟು ಕೊಟ್ಟಿದ್ದಾರಾ? ನಾವು ಕೊಟ್ಟಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಟೀಕೆ ಮಾಡುವ ಅಧಿಕಾರ ಸಿಕ್ಕಿದೆ. ಅವರು ಟೀಕೆ ಮಾಡುತ್ತಿರಲಿ, ನಾವು ಬಡವರ ಪರವಾಗಿ ಕೆಲಸ ಮಾಡುತ್ತಿರುತ್ತೇವೆ’ ಎಂದು ತಿರುಗೇಟು ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಭಯ ಹುಟ್ಟಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಬಹಳ ಸಂತೋಷ, ಅವರಿಗೆ ಶುಭವಾಗಲಿ. ಅವರ ಸಂತೋಷಕ್ಕೆ ಏನು ಬೇಕೋ ಅದನ್ನು ಮಾತನಾಡಲಿ’ ಎಂದರು.

ಭಾರತ್ ಜೋಡೋ ಪಾದಯಾತ್ರೆಗೆ ಬಿಜೆಪಿ ಟೀಕಿಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸೂಯೆಗೆ ಮದ್ದಿಲ್ಲವೆಂದು ಹೇಳಿದ್ದಾರೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಕಾರ್ಯಕ್ಕೆ ಭಾಗಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ತಾಲೂಕಿನ ಹುತ್ತದಿಂಬದ ರಮೇಶ್ ಮನೆಗೆ ಭೇಟಿ ಮಾಡಿ ಸಾಂತ್ವಾನ ಹೇಳಿದ ಡಿಕೆಶಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದರು.

ಬಿಜೆಪಿಯವರು ಯಾವುದಾದರೂ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರಾ..?ದೇಶಕ್ಕೆ ಏನಾದ್ರೂ ಪ್ರಾಣ ಕೊಟ್ಟಿದ್ದಾರಾ..?ಸ್ವಾತಂತ್ರ್ಯ ತಂದಿದ್ದಾರಾ‌‌..? ಸಂವಿಧಾನ ತಂದಿದ್ದಾರಾ..?ಬಡವರಿಗೆ ಮನೆ, ರೈತರಿಗೆ ಭೂಮಿ ಕೊಟ್ಟಿದ್ದಾರಾ…? ಎಂದು ಸಾಲು ಸಾಲು ಪ್ರಶ್ನಿಸಿದರು.

ನಾವು ತಂದ ಪ್ರಜಾಪ್ರಭುತ್ವದಿಂದಲೇ ಅವರಿಗೆ ಶಕ್ತಿ ಬಂದಿದೆ. ಅದಕ್ಕಾಗಿ ಟೀಕೆ ಮಾಡ್ತಿದ್ದಾರೆ.ಟೀಕೆ ಮಾಡಿಕೊಂಡೇ ಇರಲಿ.. ನಾವು ಬಡವರ ಪರವಾಗಿ ಇರ್ತೇವೆ. ಶುಭವಾಗಲಿ ಎಂದು ಮಾರ್ಮಿಕವಾಗಿ ಹಾರೈಸಿದರು.

ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಡಿಕೆಶಿ- ಸಿದ್ದುಗೆ ಭಯವಾಗುತ್ತಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ‌ ಪ್ರತಿಕ್ರಿಯೆಸಿದ ಡಿಕೆಶಿ, “ಒಳ್ಳೆಯದು.. ನಳೀನ್ ಕುಮಾರ್ ಕಟೀಲ್ ಹೇಳಿದ್ದು ಸಂತೋಷ ಎಂದು ಡಿಕೆಶಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು