News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ ಈದ್ ಮಿಲಾದ್ ಸಂಘರ್ಷವನ್ನ ಖಂಡಿಸುತ್ತೇನೆ- ನಳಿನ್ ಕುಮಾರ್ ಕಟೀಲ್

Nalin Kumar Kateel condemns Shimoga Eid Milad clash
Photo Credit : News Kannada

ಮಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ ಈದ್ ಮಿಲಾದ್ ಸಂಘರ್ಷವನ್ನ ಖಂಡಿಸುತ್ತೇನೆ. ಗಣೇಶ ಚತುರ್ಥಿ ಯಾವುದೇ ಗಲಾಟೆ ನಡೆಯದೇ ಶಾಂತಿಯುತವಾಗಿ ನಡೆದಿದೆ. ಆದರೆ ಶಿವಮೊಗ್ಗ ಗಲಾಟೆ ಹಿಂದೆ‌ ಮತಾಂಧ ಶಕ್ತಿಗಳ ಕೈವಾಡ ಇದೆ.

ಈದ್ ಮೆರವಣಿಗೆಯಲ್ಲಿ ಹಿಂದೂಗಳ ಅಂಗಡಿ, ಮನೆಗಳ ಮೇಲೆ ದಾಳಿಯಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ರೀತಿ ಆಗಿದೆ. ರಾಜ್ಯದಲ್ಲಿ ಪಾಕಿಸ್ತಾನ ಧ್ವಜ, ಪಾಕ್ ಪರ ಘೋಷಣೆ ಆಗ್ತಾ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಾಣ್ತಾ ಇವೆ. ಮಂಗಳೂರು ಕುಕ್ಕರ್ ಬಾಂಬ್ ನಲ್ಲೂ ಶಿವಮೊಗ್ಗದ ನಂಟಿದೆ. ಭಟ್ಕಳ ಬ್ರದರ್ಸ್ ರೀತಿಯಲ್ಲಿ ತೀರ್ಥಹಳ್ಳಿ ಬ್ರದರ್ಸ್ ಮೂಲಕ ಚಟುವಟಿಕೆ ಆಗ್ತಿದೆ. ಸರ್ಕಾರ ‌ಕಠಿಣ ಕ್ರಮ ಕೈಗೊಳ್ಳದೇ ಶಾಂತಿ ಸುವ್ಯವಸ್ಥೆ ವಿಫಲವಾಗಿದೆ. ಈ ಘಟನೆಯಲ್ಲಿ ಆತಂಕವಾದದ ಸಾಧ್ಯತೆ ಇದೆಯಾ ಅಂತ ತನಿಖೆ ಮಾಡಬೇಕು. ಇದರ ಪೂರ್ಣ ತನಿಖೆ‌ ಆಗಲಿ, ಇದು ಸರ್ಕಾರದ ಪೂರ್ಣ ವೈಫಲ್ಯ. ಸಿಎಂ ಮತಬೇಟೆಗಾಗಿ ಇದರ ವಿರುದ್ದ ಕ್ರಮ ಕೈಗೊಳ್ತಾ ಇಲ್ಲ. ಹರ್ಷ ಮತ್ತು ಪ್ರವೀಣ್ ಹತ್ಯೆ ಬಳಿಕ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು.

ಈ ಸರ್ಕಾರ ಸಣ್ಣ ಮಟ್ಟದ ರಾಜಕಾರಣ ಮಾಡ್ತಾ ಇದೆ. ತುಷ್ಟೀಕರಣ ನೀತಿ ಮೂಲಕ ಮತಾಂಧ ಶಕ್ತಿಗಳಿಗೆ‌ ಮತ್ತೆ ಧೈರ್ಯ ಬಂದಿದೆ. ಕೋಲಾರದಲ್ಲಿ ತಲ್ಬಾರ್ ದ್ವಾರ ಹಾಕಿದಾಗಲೇ ಇವರು ಎಚ್ಚೆತ್ತುಕೊಳ್ಳಬೇಕಿತ್ತು. ಐಎನ್ಡಿ ಒಕ್ಕೂಟ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು