News Karnataka Kannada
Monday, April 29 2024
ಚಿಕಮಗಳೂರು

ಗೋ ಬ್ಯಾಕ್ ಶೋಭಕ್ಕ’ ಅಭಿಯಾನಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಠಕ್ಕರ್..!

ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿಸಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Photo Credit : News Kannada

ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಅಭಿಯಾನ ಹಾಗೂ ಪತ್ರ ಚಳುವಳಿ ನಡೆಸಿದ್ದಾರೆ.

ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ. ಈ ದರ್ಪದಿಂದಲೇ ಕೆಲವರು ಈ ರೀತಿ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ನಾನು ಕೊಡಲ್ಲ ಹೈಕಮಾಂಡ್, ಹಿರಿಯರು ಕೊಡುತ್ತಾರೆ :
ನನ್ನ ವಿರುದ್ದ ಕಳೆದ ಚುನಾವಣೆ ಯಲ್ಲಿ ಗೋಬ್ಯಾಕ್ ಮಾಡಿದ್ದರು. ಈ ಚುನಾವಣೆಯಲ್ಲೂ ಮಾಡಿದ್ದಾರೆ. ವ್ಯವಸ್ಥಿತವಾಗಿ ಮಾಡಿದ್ದಾರೆ. ಮಾಡಿಸುತ್ತಿದ್ದಾರೆ. ಹೈಕಮಾಂಡ್ ನನಗೆ ಯಾವ ಜವಬ್ದಾರಿ ನೀಡಿದೆ ಪ್ರಾಮಾಣಿಕವಾಗಿ, ಕಪ್ಪು ಚುಕ್ಕೆ ಬಾರದಂತೆ ರಾಜಕೀಯ ಮಾಡಿದ್ದೇನೆ.

ಯಾರು ಷಡ್ಯಂತ ಮಾಡಿದರು. ಉತ್ತರ ನಾನು ಕೊಡಲ್ಲ ಹೈಕಮಾಂಡ್, ಹಿರಿಯರು ಕೊಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. ಪತ್ರ ಯಾರು ಬರೆದರು? ಯಾರದ್ದು ಹ್ಯಾಂಡ್ ರೈಟಿಂಗ್ ಬರೆದರಾ? ಯಾರು ಪೋಸ್ಟ್ ಮಾಡಿದರು? ಎಷ್ಟು ಪೋಸ್ಟ್ ಮಾಡಿದರು.

ಇದೆಲ್ಲದರ ಬಗ್ಗೆ ಕೇಂದ್ರ ಕೂಡ ವರದಿ ತರಿಸಿ ಕೊಂಡಿದೆ. ಸತ್ಯ ಕೇಂದ್ರದವರಿಗೆ ತಿಳಿದಿದೆ ಎಂಬ ವಿಶ್ವಾಸವಿದೆ ಎಂದರು.ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿದೆ.

ಗೋ ಬ್ಯಾಕ್ ಎಂದು ಅಭಿಮಾನ ಮಾಡುತ್ತಿರುವವರು ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಆಗಲ್ಲ ಎಂದು ಬಿಜೆಪಿ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಆದ ಮೇಲೆ ಎಲ್ಲವೂ ಆಚೆ ಬರುತ್ತದೆ.
ಕಾಂಗ್ರೆಸ್ ಆಂತರಿಕ ರಾಜಕೀಯದ ಬಗ್ಗೆ ನಾನು ಕಮೆಂಟ್ ಮಾಡಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಏನು ನಡೆಯುತ್ತಿದೆ ಎಂದು ಚುನಾವಣೆ ಬಳಿಕ ಆಚೆಗೆ ಬರುತ್ತದೆ ಎಂದರು.

ಚುನಾವಣೆ ಬಳಿಕ ಎಲ್ಲವೂ ಹೊರ ಬರಲಿದೆ :
ಈ ಬಾರಿ ಶೋಭಾ ಲೋಕಸಭಾ ಚುನಾವಣಾ ಟಿಕೆಟ್ ಪತನವಾಗುತ್ತೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ, ಡಿಸಿಎಂ ಮಧ್ಯ ಏನು ನಡೆದಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ. ಅವರ ಎಂಎಲ್‌ಎಗಳನ್ನು ಉಳಿಸಿಕೊಳ್ಳಲು ಆಗಲ್ಲ ಅಂತ ಶಾಸಕರಿಗೆ ಬಿಜೆಪಿ ಶಾಸಕರಿಗೆ ಕೈ ಹಾಕಿದ್ದಾರೆ. ಚುನಾವಣೆ ಬಳಿಕ ಎಲ್ಲವೂ ಹೊರ ಬರಲಿದೆ ಎಂದು ಎಂಬಿ ಪಾಟೀಲ್ ವಿರುದ್ಧ ಶೋಭಾ ಅಸಮಾಧಾನ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು