News Karnataka Kannada
Saturday, April 27 2024
ಚಿಕಮಗಳೂರು

ಚಿಕ್ಕಮಗಳೂರು: ಸಿ.ಟಿ.ರವಿ ಅವರಿಂದ ಗ್ರಾಮದ ಅಭಿವೃದ್ಧಿ,ಮಾಧ್ಯಮಗಳ ವರದಿ ವಿರುದ್ಧ ಗ್ರಾಮಸ್ಥರ ಆಕ್ರೋಶ

Bhagirathi Murulya, a poor woman, would not have got a ticket if money was the dominant factor in the BJP
Photo Credit : News Kannada

ಚಿಕ್ಕಮಗಳೂರು: ಉದ್ದೇಬೋರನಹಳ್ಳಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರೂಡಪ್ಪ ಹಾಗೂ ಸಿ.ಟಿ.ರವಿ ಅವರ ಸಂಬಂಧಿ ಸುದರ್ಶನ್ ಅವರನ್ನು ಉದ್ದೇಬೋರನಹಳ್ಳಿಯ ಕೆಲ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗಕ್ಕೆ ಉದ್ದೇ ಬೋರನಹಳ್ಳಿ ಗ್ರಾಮಸ್ಥರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು. ಈ ಸುದ್ದಿಯನ್ನು ವರದಿ ಮಾಡಿದ ಮಾದ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಕಂಡು ಬಂದಿದೆ.

ಇತ್ತೀಚೆಗೆ ಚುನಾವಣಾ ಪ್ರಚಾರಕ್ಕಾಗಿ ಉದ್ದೇಬೋರನಹಳ್ಳಿ ಗ್ರಾಮಕ್ಕೆ ಸಿ.ಟಿ.ರವಿ ಅವರ ಆಪ್ತರು ತೆರಳಿದ್ದ ವೇಳೆ ಗ್ರಾಮದ ಕೆಲವರು ಸಿ.ಟಿ.ರವಿ ಅವರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ೨೦ ವರ್ಷವಾದರೂ ಗ್ರಾಮದ ಅಭಿವೃದ್ದಿ ಯಾಗಿಲ್ಲ. ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದರು.

ಈ ಕುರಿತ ವಿಡಿಯೋ ವೈರಲ್ ಆಗಿದ್ದು ಅದನ್ನು ಮಾದ್ಯಮಗಳು ಸಹ ಯಥಾವತ್ ಬಿತ್ತರಿಸಿದ್ದವು. ಈ ಸುದ್ದಿ ಎಲ್ಲೆಡೆ ಪಸರಿಸುವಷ್ಠರಲ್ಲಿ ಉದ್ದೇಬೋರನಹಳ್ಳಿ ಗ್ರಾಮಸ್ಥರೇ ಸಿ.ಟಿ.ರವಿ ಅವರ ಕಾರ್ಯ ವೈಖರಿಯನ್ನು ಪ್ರಶಂಶಿಸಿ ಸುದ್ದಿ ಮಾಡಿದ ಮಾದ್ಯಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಟಿ ರವಿ ಅವರು ಕಳೆದ ೨೦ ವರ್ಷಗಳಿಂದ ಮಾಡಿ ರುವ ಅಭಿವೃದ್ಧಿಗೆ ಚಿಕ್ಕಮಗಳೂರು ನಗರ ಹಾಗೂ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದಿರುವ ಅವರು ನೀರಾವರಿ ವಿಚಾರದಲ್ಲಿಯೂ ಅವರು ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಅವರು ಎಲ್ಲಿಯೂ ತಾರತಮ್ಯ ಮಾಡಿಲ್ಲವೆಂದು ಸ್ಪಷ್ಟಪಡಿಸಿರುವ ಗ್ರಾಮಸ್ಥರು ವಿಡಿಯೋವನ್ನೇ ಸುದ್ದಿ ಮಾಡಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

೧೨೦೦ ಕೋಟಿ ವೆಚ್ಚದ ಭದ್ರಾದಿಂದ ಗೋಂದಿ ಯೋಜನೆಯಿಂದ ಜಿಲ್ಲೆಗೆ ನೀರಾವರಿ ಯೋಜನೆ ತರುವ ಮೂಲಕ ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಿ ರುವುದು ಸಿ.ಟಿ.ರವಿ ಎಂದ ಗ್ರಾಮಸ್ಥರು. ಗ್ರಾಮದವರು ಆಕಸ್ಮಿಕವಾಗಿ ಮಾತನಾ ಡಿದ ಮಾತುಗಳನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ.

ಗ್ರಾಮಕ್ಕೆ ಬೇಕಾದ ಎಲ್ಲಾ ಮೂಲಸೌಲಭ್ಯಗಳು, ಸಮುದಾಯ ಭವನ ನಿರ್ಮಾಣಕ್ಕೆ, ಒತ್ತು ನೀಡಿದ್ದಾರೆಂದು ಸಿ.ಟಿ.ರವಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗ್ರಾಮಸ್ಥರು ಸಿ.ಟಿ.ರವಿ ಅವರು ಮಾಡಿರುವ ಅಭಿವೃದ್ಧಿಯಲ್ಲಿ ಈವರೆಗೆ ಯಾವ ರಾಜಕಾರಣಿಯೂ ಮಾಡಿಲ್ಲವೆಂದರು.
ಸಿ.ಟಿ.ರವಿ ಅವರನ್ನು ಯಾವ ಲಿಂಗಾಯಿತ ಮತದಾರರು ಕಡೆಗಣಿಸಿ ಲ್ಲವೆಂದ ಗ್ರಾಮಸ್ಥರು ನಮ್ಮ ಬೆಂಬಲ ಸಿ.ಟಿ.ರವಿ ಅವರಿಗೆನ್ನುವ ಮೂಲಕ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು