News Karnataka Kannada
Thursday, May 02 2024
ಚಿಕಮಗಳೂರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ 100 ವರ್ಷ ಮೇಲ್ಪಟ್ಟ 90 ಮಂದಿಯ ಮತದಾನಕ್ಕೆ ವಿಶೇಷ ವ್ಯವಸ್ಥೆ

Special arrangements have been made for the voting of 90 people above 100 years of age in chikkamagaluru district.
Photo Credit : News Kannada

ಚಿಕ್ಕಮಗಳೂರು: ಜಿಲ್ಲೆಯಲ್ಲಿ 100 ವರ್ಷಕ್ಕಿಂತ ಹೆಚ್ಚಿನ ವಯೋ ಮಾನದ 90 ವ್ಯಕ್ತಿಗಳಿದ್ದು, ಅವರಿಗೆ ವಿಶೇಷವಾಗಿ ಅವರನ್ನು ಗೌರವಿಸಿ ಮತಗಟ್ಟೆಗೆ ಕರೆತಂದು ಮತದಾನದ ನಂತರ ಮತ್ತೆ ಮನೆಗೆ ಬಿಟ್ಟುಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಪ್ರಭು ತಿಳಿಸಿದರು.

ಇದಕ್ಕೆ ಸಂಬಂಧಿಸಿದ ಗ್ರಾ.ಪಂ. ತಾಲ್ಲೂಕು ಹಾಗೂ ಜಿಲ್ಲಾ ಆಡಳಿತದ ಎಲ್ಲಾ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಕಲ ಚೇತನರು ಹಾಗೂ ೮೦ ವರ್ಷ ಮೇಲ್ಪಟ್ಟವರನ್ನು ಕರೆತರಲು ವಾಹನ ವ್ಯವಸ್ಥೆ, ಮನೆ ಮನೆಗೆ ತೆರಳಿ ಮತ ಹಾಕಿಸಲು ೨೫೦ ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಗ್ರಾ.ಪಂ. ಸಹಯೋಗದಲ್ಲಿ ಅವರನ್ನು ಮತಗಟ್ಟೆಗೆ ಕರೆತರಲಾಗುವುದು.

ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಜಿಲ್ಲೆ ೧೨೦ ಮತಗಟ್ಟೆಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗಿದೆ. ಆವರಣಗಳನ್ನು ಸ್ವಚ್ಛಮಾಡಿ, ಅಂದಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಎಲ್ಲಾ ೧೨೦ ಮತಗಟ್ಟೆಗಳ ಭಾವಚಿತ್ರವನ್ನು ಏಪ್ರಿಲ್ ೩೦ ರಂದು ಬಿಡುಗಡೆಗೊಳಿಸಲಾಗುವುದು. ಮತದಾರರ ಜಾಗೃತಿ ಅರಿವು ಭಾಗವಾಗಿ ಎಲ್ಲೆಡೆ ಜಾಥಾಗಳು, ಕ್ಯಾಂಡಲ್ ಮಾರ್ಚ್, ಪಂಜಿನ ಮೆರವಣಿಗೆ, ಮಾನವ ಸರಪಳಿ, ರಂಗೋಲಿ ಸ್ಪರ್ಧೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್ ೩೦ ರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರತಿ ಮನೆಗೆ ಕರಪತ್ರಗಳನ್ನು ಹಂಚಲಾಗುವುದು ಎಂದರು.

ವಿಶೇಷ ಮತದಾರರಿಗೆ ವಿಶೇಷ ವ್ಯವಸ್ಥೇ ಮೂಲಕ ಮತದಾನಕ್ಕೆ ಕರೆತರಲಾಗುವುದು ಇದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯದಲ್ಲೇ ಪ್ರಥಮ ಜಿಲ್ಲೆಯಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

೧೧೦೦ ಕ್ಕಿಂತ ಹೆಚ್ಚು ಮತದಾರರಿರುವ ೨೦೯ ಮತಗಟ್ಟೆಗಳಲ್ಲಿ ಸರದಿಯಲ್ಲಿ ಹೆಚ್ಚು ಜನರಿದ್ದರೆ ಕ್ಯೂ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಮಾಡಲಾಗುವುದು. ೨೦೦ಕ್ಕಿಂತ ಕಡಿಮೆ ಮತದಾರರಿರುವ ೧೬ ಮತಗಟ್ಟೆಗಳಿದ್ದು, ಅವರನ್ನೆಲ್ಲಾ ನಮ್ಮ ವ್ಯವಸ್ಥೆ ಮೂಲಕವೇ ಅವರನ್ನು ಮತಗಟ್ಟೆಗೆ ಕರೆತಂದು ಶೇ.೧೦೦ ಮತದಾನ ಮಾಡಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಾಡಿಗಳು, ಕುಗ್ರಾಮಗಳಲ್ಲಿರುವವರನ್ನು ಸರ್ಕಾರಿ ವಾಹನಗಳಲ್ಲೇ ಕರೆತಂದು ಮತದಾನ ಮಾಡಿಸಲಾಗುವುದು. ೨೬ ನಕ್ಸಲ್ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಿಸಲು ವಿಶೇಷ ಅರಿವು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವ್ಯಾಪಕವಾಗಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದರು.

ಪೊಲೀಸ್ ಸ್ಟೇಷನ್‌ಗಳಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಲೈವ್ ಮಾಹಿತಿಯನ್ನು ಮಾದ್ಯಮಗಳಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು