ಚಿಕ್ಕಮಗಳೂರು: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರೂ ಸಿ.ಟಿ.ರವಿಯನ್ನು ನೆಚ್ಚಿ ಕೊಂಡಿಲ್ಲ, ಬಿಜೆಪಿ ಸಿದ್ಧಾಂತವನ್ನು ನೆಚ್ಚಿ ಕೊಂಡಿದೆ ಎಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.
ಹಿಂದೆ ಬಿಜೆಪಿ ಎಂ.ಪಿ ಕುಮಾರ ಸ್ವಾಮಿ ಅವರಿಗೆ ೫ ಬಾರಿ ಟಿಕೆಟ್ ನೀಡಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗುವುದರಿಂದ ಈ ರೀತಿ ಹೇಳುತ್ತಾರೆ. ಕುಮಾರಸ್ವಾಮಿ, ಜೀವರಾಜ್, ನನ್ನನ್ನು ಸೈದ್ಧಾಂತಿಕ ಬದ್ಧತೆ ಕಾರಣಕ್ಕೆ ಜನರು ಗೆಲ್ಲಿಸಿದ್ದಾರೆ ಎಂದರು.
ಮೂಡಿಗೆರೆಯಲ್ಲಿ ಬಿಜೆಪಿ ಬಲವಾಗಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಕುಮಾರ ಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ನಿನ್ನೆ ನನ್ನ ಮನೆಗೆ ಬಂದು ಹೊಗಳಿ ಹೋಗಿದ್ದರು. ಈಗ ಹೀಗೆ ಮಾತನಾಡ್ತಾರೆ. ನಾಳೆ ಏನ್ ಮಾತನಾಡ್ತಾರೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.