News Karnataka Kannada
Wednesday, May 01 2024
ಚಿಕಮಗಳೂರು

ಚಿಕ್ಕಮಗಳೂರು: ಎಂದಿಗೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ- ಸಿ.ಟಿ.ರವಿ

Chikkamagaluru: I have never misused power, says CT Ravi
Photo Credit : News Kannada

ಚಿಕ್ಕಮಗಳೂರು: ಜನ ಕೊಟ್ಟ ಅಧಿಕಾರವನ್ನು ಎಂದಿಗೂ ದುರುಪ ಯೋಗ ಮಾಡಿಕೊಂಡಿಲ್ಲ. ಚಿಕ್ಕಮಗ ಳೂರಿನ ಅಭಿವೃದ್ಧಿ, ಜನ ಹಿತಕ್ಕೆ ಬಳಸಿ ಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಟಿ.ರವಿ ಹೇಳಿದರು.

ಅವರು ಕ್ಷೇತ್ರದ ದುಂಗೆರೆ, ಎಂ.ಎಂ.ಡಿ.ಹಳ್ಳಿ, ದಂಬದ ಹಳ್ಳಿ, ನಲ್ಲೂರು, ಉಂಡೇದಾಸರಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ, ಮತಯಾಚನೆ ಮಾಡಿ ಮಾತನಾಡಿದರು.

ಸತತವಾಗಿ ಹಲವು ವರ್ಷಗಳಿಂದ ನನ್ನನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ, ನನಗಿಂತ ಮೊದಲು ಸಗೀರ್ ಅಹ ಮದ್‌  ೧೫ ವರ್ಷ ಶಾಸಕರಾಗಿ, ೧೦ ವರ್ಷ ಮಂತ್ರಿಯಾಗಿದ್ದರು ಸಹ ಉಂಡೇದಾಸರಹಳ್ಳಿ ಸೇತುವೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಬರಬೇಕಾಯಿತು, ಕಾಲು ಇಟ್ಟಲೆಲ್ಲ ಎರೆಮಣ್ಣಿನಲ್ಲಿ ಹೂತುಹೋಗುತ್ತಿದ್ದ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ಮಾಡಲಾಯಿತು, ರಸ್ತೆ ಮತ್ತು ಸೇತುವೆ ನಿರ್ಮಾಣವಾದ ಮೇಲೆ ಭೂಮಿಯ ಜತೆಗೆ ಜನರ ಬದುಕಿಗೂ ಬೆಲೆ  ದೊರೆಯಿತು ಎಂದರು.

ನೀವು ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ೬೩೦ ಕೋಟಿ ರೂ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜನ್ನು ತೇಗೂರು ಬಳಿ ನಿರ್ಮಾಣವಾಗುತ್ತಿದ್ದು, ಬಡವರಿಗೆ ಅನುಕೂಲವಾಗಲಿದೆ, ಕಡೂರು ಮತ್ತು ಚಿಕ್ಕಮಗಳೂರು ರಸ್ತೆ ಮುಕ್ತಾಯದ ಹಂತದಲ್ಲಿದೆ, ಬೇಲೂರು ಮತ್ತು ಹಾಸನ ಚತುಷ್ಪಥ ರಸ್ತೆ ಮತ್ತು ಚಿಕ್ಕಮಗಳೂರು, ಬೇಲೂರು, ಹಾಸನ ರೈಲ್ವೇ ಯೋಜನೆ ಮಂಜೂರು ಮಾಡಿಸಲಾಗಿದೆ.

ಜಿಲ್ಲೆಗೆ ಹೊಸ ವಿಶ್ವ ವಿದ್ಯಾಲಯ, ಒಳಾಂಗಣ ಕ್ರೀಡಾಂಗಣ ಕೆಲಸ ಪ್ರಗತಿಯಲ್ಲಿದೆ, ಕ್ರಿಕೇಟ್ ಸ್ಟೇಡಿಯಂ, ಕ್ಯಾನ್ಸರ್ ಆಸ್ಪತ್ರೆ, ವಿಜ್ಞಾನ ಕೇಂದ್ರ, ೯ಕೋಟಿರೂ ವೆಚ್ಚದ ಅಂಬೇಡ್ಕರ್ ಭವನ, ಎಲ್ಲಾ ಗ್ರಾಮಗಳ ದೇವಸ್ಥಾನಕ್ಕಾಗಿ ಅನುದಾನವನ್ನು ನೀಡುವುದರ ಮೂಲಕ ಶಕ್ತಿ ಮೀರಿ ಕೆಲಸವನ್ನು ಮಾಡಲಾಗಿದೆ, ತೆಂಗಿನ ಮರವನ್ನು ನೆಟ್ಟು ನೀರು ಗೊಬ್ಬರವನ್ನು ಹಾಕಿ ಬೆಳಿಸಿದ್ದೀರಿ ಫಸಲನ್ನು ಸಹ ಕೊಡುತ್ತಿದೆ ಇಂತಹ ಸಂದರ್ಭದಲ್ಲಿ ಫಸಲನ್ನು ಕೊಡುತ್ತಿರುವ ಮರವನ್ನು ಕಡಿದರೆ ಗ್ರಾಮಕ್ಕೂ ಹಾಗೂ ಜಿಲ್ಲೆಗೂ  ನಷ್ಟ ಎಂದರು.

ಸಂಬಂದವನ್ನು ಕಟ್ಟುವ ಸಲುವಾಗಿ ಚಿಕ್ಕಮಗಳೂರು ಹಬ್ಬವನ್ನು ನಡೆಸಲಾಯಿತು, ದಾರಿಯಲ್ಲಿ ಹೋಗುತ್ತಿರುವಾಗ ಚಿಕ್ಕಮಕ್ಕಳು ಸಹ ಸಿ.ಟಿ.ರವಿ ಅವರು ಎಂದು ಗುರುತಿಸಿ ರವಿ ಅಣ್ಣ ಎಂದು ಕರೆಯುತ್ತಾರೆ, ಪ್ರೀತಿ, ವಿಶ್ವಾಸ ಮತ್ತು ಸಂಬಂದವನ್ನು ಕಟ್ಟುವ ರಾಜಕಾರಣವನ್ನು ಮಾಡಿದ್ದೇನೆ, ಬಿಜೆಪಿ ಸರ್ಕಾರವು ಯುಗಾದಿ, ಗಣೇಶ ಹಬ್ಬ, ದೀಪಾವಳಿ ಹಬ್ಬಕ್ಕೆ ೩ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ಮಾಡಿದೆ.

ಆಯುಷ್‌ಮಾನ್ ಭಾರತ ಯೋಜ ನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಂದು ಕುಟುಂಬಕ್ಕೆ ೫ ಲಕ್ಷದವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ, ೫ ಕೆ.ಜಿ ಅಕ್ಕಿಯ ಜತೆಗೆ ೫ ಕೆ.ಜಿ ಸಿರಿದಾನ್ಯ, ೨೫ ಯುನಿಟ್ ವಿದ್ಯುತ್, ೨೦೦೦ರೂ ವಿದವಾ ವೇತನ, ೩೦೦೦ ಅಂಗವಿಕಲವೇತನ ಕೊಡಲು ಪಕ್ಷ ತೀರ್ಮಾನಿಸಲಾಗಿದೆ, ಎಸ್ಸಿ/ಎಸ್ಟಿ ಒಳಮೀಸಲಾತಿಯನ್ನು ನೀಡಲಾಗುತ್ತಿದ್ದು, ನನ್ನ ಅವಧಿಯಲ್ಲಿ ಜಿಲ್ಲೆಗೆ ೫೨ ಅಂಬೇಡ್ಕರ್ ಭವನವನ್ನು ಮಂಜೂರು ಮಾಡಿಸಲಾಗಿದೆ ಎಂದರು.

ಸಿ.ಟಿ.ರವಿಯನ್ನು ರಾಜಕೀಯವಾಗಿ ಮುಗಿಸಬೇಕೆಂದು ಹೋರಟಿದ್ದಾರೆ, ನಿಮ್ಮ ಮನೆ ಮಗ ಎಂದು ಭಾವಿಸಿ ಮನೆ ಮಗನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ನಾನು ಒಳ್ಳೆಯ ಕೆಲಸವನ್ನು ಮಾಡಿದ್ದೇನೆಂದರೆ, ಭಾರತೀಯ ಜನತಾ ಪಾರ್ಟಿಗೆ ನಿಮ್ಮ ಓಟುಗಳನ್ನು ನೀಡಿ, ಒಂದೊಂದು ಮತವು ಅತಿ ಮುಖ್ಯ, ಒಂದು ಲಕ್ಷ ಓಟುಗಳನ್ನು ಮಾಡುವ ಜವಾಬ್ದಾರಿ ನಿಮ್ಮದು,  ಕಮಲದ ಗುರುತಿಗೆ ಮತ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರುಗಳಾದ ರೂಪಕುಮಾರ್, ಕೋಟೆರಂಗನಾಥ್, ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು