News Karnataka Kannada
Friday, May 03 2024
ಚಿಕಮಗಳೂರು

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಜಾತಿ ಧರ್ಮದ ಚೌಕಟ್ಟಿಲ್ಲ- ಕೆ ಜಾರ್ಜ್

Congress has no caste-religion framework: K George
Photo Credit : News Kannada

ಚಿಕ್ಕಮಗಳೂರು: ಪಕ್ಷಕ್ಕೆ ಯಾವುದೇ ಜಾತಿ ಧರ್ಮದ ಚೌಕಟ್ಟಿಲ್ಲ ಎಲ್ಲಾ ಜಾತಿ ಜನಾಂಗಗಳು ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ  ಕೆ ಜಾರ್ಜ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಇರುವ ಎಲ್ಲಾ ಭಾಷೆ ಉಳ್ಳ ಪಕ್ಷ ಕಾಂಗ್ರೆಸ್ ಸರ್ವಧರ್ಮದವರ ಬೆನ್ನೆಲುಬು ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವರಿಗೆ ಮರುಜನ್ಮ ನೀಡಿದಂತ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ತಂದಿರುವುದು ಸಂತಸ ತಂದಿದೆ ಎಂದರು. ಪಕ್ಷವನ್ನು ಕಟ್ಟುವುದರಲ್ಲಿ ಡಿಕೆ ಶಿವಕುಮಾರ್ ಅವರು ನಿಸ್ಸೀ ಮರು ಅವರು ಹೇಳಿದ ಹಾಗೆ ತಾವು ನಿದ್ರೆ ಮಾಡಲಿಲ್ಲ ಕಾರ್ಯಕರ್ತರಿಗೆ ನಿದ್ರೆ ಮಾಡಲು ಬಿಡಲಿಲ್ಲ ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದರು.

ಕರ್ನಾಟಕದವರಾದ ಮಲ್ಲಿಕಾ ರ್ಜುನ್ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ನೆಹರುರವರ ಕುಟುಂಬ ಆಗರ್ಭ ಶ್ರೀಮಂತರು ಅವರಿಗೆ ಅಧಿಕಾರದ ಆಸೆ ಇಲ್ಲ ಹಣದ ಅವಶ್ಯಕತೆ ಇಲ್ಲ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಕುಟುಂಬ ಎಂದು ಬಣ್ಣಿಸಿದರು.

ಬಿಜೆಪಿಯವರು ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ, ಯಾರು ಜೈಲಿಗೆ ಹೋಗಿಲ್ಲ, ಯಾರು ಸಹ ದೇಶಕ್ಕಾಗಿ ಪ್ರಾಣವನ್ನು ಕೊಟ್ಟಿಲ್ಲ ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ವಿಭಾಗ ಮಾಡಿದ ಮಹಿಳೆ. ದೇಶಕ್ಕೆ ಒಳಿತನ್ನು ಮಾಡಿದರು. ಆದರೆ ಬಿಜೆಪಿಯವರು ಸರ್ಜಿಕಲ್ ಸ್ಟ್ರೈಕ್ ಅಂತ ಹೇಳಿ ಅದನ್ನು ದೊಡ್ಡದಾಗಿ ಬಣ್ಣಿಸಿದರು ಎಂದರು.

ರಾಹುಲ್ ಗಾಂಧಿಯವರು ಮಾಧ್ಯಮದವರ ಮುಂದೆ ಧೈರ್ಯವಾಗಿ ಮಾತನಾಡುವ ವ್ಯಕ್ತಿ, ಆದರೆ ಮೋದಿ ಅವರು ಇದುವರೆಗೂ ಮಾಧ್ಯಮದ ವರೊಂದಿಗೆ ಸೌಜನ್ಯವಾಗಿ ಮಾತನಾಡಿಸಿಲ್ಲ ಯಾಕಂದ್ರೆ ಮಾತನಾಡುವ ಧೈರ್ಯ ಅವರಿಗಿಲ್ಲ ಎಂದರು.

ರಾಜ್ಯದ ಐದು ಗ್ಯಾರಂಟಿಗಳಿಗೆ ಮೂಲ ಕಾರಣ ರಾಹುಲ್ ಗಾಂಧಿ ಐದು ಗ್ಯಾರೆಂಟಿಯನ್ನು ನಾವು ಯಾರಿಗೆ ಕೊಟ್ಟಿದ್ದೇವೆ ನಮ್ಮ ರಾಜ್ಯದ  ಮಧ್ಯಮ ವರ್ಗದವರು,  ಹಿಂದುಳಿದವರು, ಬಡವರ ಆರ್ಥಿಕ ಪರಿಸ್ಥಿತಿ ಉತ್ತೇಜನಕ್ಕೆ ಸರ್ಕಾರ ಕೊಡುಗೆ ನೀಡಿದೆ.
ಐದು ಗ್ಯಾರಂಟಿಯಲ್ಲಿ ಬಹುತೇಕ ಮಹಿಳೆಯರಿಗೆ ಉತ್ತಮ ಯೋಜನೆಗಳನ್ನು ರೂಪಿಸಿದೆ ಇದನ್ನು ಸಹಿಸದ ಬಿಜೆಪಿಗರು ಬಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರು ೨೦೧೩ ರಲ್ಲಿ ಅಧಿಕಾರಕ್ಕೆ ಬಂದ ಒಂದೇ ಗಂಟೆಯಲ್ಲಿ ಅನ್ನಭಾಗ್ಯವನ್ನು ಜನರಿಗೆ ನೀಡಿದರು. ಬಿಜೆಪಿಯವರು ಹಾಸ್ಯ ಮಾಡುತ್ತಲೇ ಇರಲಿ ಮಾತಾಡುತ್ತಲೇ ಇರಲಿ, ಪ್ರತಿಭಟನೆ ಮಾಡುತ್ತಲೇ ಇರಲಿ. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತಹ ಯೋಜನೆಗಳನ್ನು ಅಂತವಾಗಿ ಜಾರಿಗೆ ತಂದೆ ತರುತ್ತದೆ ಎಂದರು.

ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ. ನಾವು ಪುಕ್ಕಟೆಯಾಗಿ ಅಕ್ಕಿ ಕೇಳುತ್ತಿಲ್ಲ ಹಣಕ್ಕಾಗಿ ಕೇಳುತ್ತಿದ್ದೇವೆ ಎರಡು ಕೋಟಿ ೧೪ ಲಕ್ಷ ಜನರಿಗೆ ಉಚಿತ  ವಿದ್ಯುತ್ತಿನಿಂದ ಉಪಯೋಗವಾಗುತ್ತಿದೆ ಎಂದರು.

ಮುಂದೆ ಲೋಕಸಭೆ ಚುನಾವಣೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಲು ಕಾರ್ಯಕರ್ತರು ಹೆಚ್ಚಿನ ಶ್ರಮ ಪಡಬೇಕು ಎಂದರು.

ಸಚಿವರನ್ನು ಗೌರವಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದಂತ ಡಾಕ್ಟರ್ ಅಂಶುಮಂತ್ ರಾಷ್ಟ್ರ, ರಾಜ್ಯ, ಜಿಲ್ಲೆ ಒಗ್ಗಟ್ಟಿನ ಮಂತ್ರದಿಂದ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಕಾರ್ಯಕರ್ತರು ಎಲ್ಲಾ ಶಾಸಕರಿಗೆ ಶಕ್ತಿ ಕೊಡುವ ಕಾರ್ಯವನ್ನು ಮಾಡಬೇಕು ಪಕ್ಷ ಸಂಘಟನೆ ಮಾಡಬೇಕು ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ, ಲೋಕಸಭೆಯಲ್ಲಿ ಜಯಭೇರಿ ಬಾರಿಸಲು ಕಾರ್ಯಕರ್ತರು ಒಂದಾಗಬೇಕು. ಜನ ಶಾಸಕರುಗಳು ಒಗ್ಗಟ್ಟಾಗಿ ಉಸ್ತುವಾರಿ ಸಚಿವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಜನಗಳ ಸಂಕಷ್ಟಕ್ಕೆ ಕೈಜೋಡಿಸಬೇಕು ಎಂದರು.

ಕಾರ್ಯಕರ್ತರ ಆಸೆಯಂತೆ ಕಾಂಗ್ರೆಸ್ಸಿನ ನಿವೇಶನದಲ್ಲಿ ಸುಸ್ಸಜ್ಜಿತವಾದಂತ ಕಟ್ಟಡವನ್ನು ಕಟ್ಟಬೇಕು ಎಂದರು.

ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ಬಿ ಎಂ ಸಂದೀಪ್, ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಹೆಚ್ ಡಿ ತಮ್ಮಯ್ಯ, ತರೀಕೆರೆ ಕ್ಷೇತ್ರದ ಶಾಸಕರಾದ ಜಿ ಎಚ್ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಡಿ ಎಲ್ ವಿಜಯಕುಮಾರ್, ಎಂ ಎಲ್ ಮೂರ್ತಿ, ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ , ರಾಷ್ಟ್ರೀಯ ಯುವ ನಾಯಕಿ ಪುಷ್ಪಲತಾ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಎ ಎನ್ ಮಹೇಶ್, ರೇಖಾ ಹುಲಿಯಪ್ಪ ಗೌಡ, ಕೆ ಮಹಮ್ಮದ್, ಕಿಸಾನ್ ಸೆಲ್ ರಾಜ್ಯ ಸಂಚಾಲಕರಾದ ಸಿ,ಎನ್ ಅಕ್ಮಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ಪಿ ಮಂಜೇಗೌಡ, ಅಧ್ಯಕ್ಷ ತನೋಜ್, ಎಸ್ಪಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಸ್ವಾಮಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್, ವೆಂಕಟೇಶ್ ನಾಯ್ಡು ಸೇರಿದಂತೆ ಇನ್ನು ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು