News Karnataka Kannada
Saturday, May 04 2024
ಉತ್ತರಕನ್ನಡ

ನಮ್ಮ ಕಾರವಾರ ತಂಡದಿಂದ ಯುವ ಉತ್ಸವ ಕಾರ್ಯಕ್ರಮ

Youth Festival programme by our Karwar team
Photo Credit : News Kannada

ಕಾರವಾರ: ನಮ್ಮ ಕಾರವಾರ ತಂಡ ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು 6 ವರ್ಷ ಪೂರೈಸಿದ್ದು ಹಿನ್ನೆಲೆಯಲ್ಲಿ ಏ.29 ರಂದು ಯುವ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಂಡದ ಪ್ರಮುಖರಾದ ಶಿವಂ ಕಾರವಾರ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವಕರೇ ಸೇರಿ ರಚಿಸಿದ ನಮ್ಮ ಕಾರವಾರ ತಂಡ ಪ್ರವಾಸೋದ್ಯಮ, ಸ್ಥಳೀಯ ವ್ಯವಹಾರ ಮತ್ತು ಕಲೆಯನ್ನು ಉತ್ತೇಜಿಸುತ್ತಿದೆ. ಅಲ್ಲದೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ನಮ್ಮ ತಂಡ ಕಳೆದ 6 ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿದೆ. ಸುಮಾರು 50 ಕ್ಕೂ ಹೆಚ್ಚು ಯುವಕ ಯುವತಿಯರು ತಂಡದಲಿದ್ದು ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜಾಗೃತಿ, ಶಾಲೆ, ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿದ್ದು ಇದೀಗ ಕಾರವಾರ ಯುವಕರಿಗೆ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಏ.29 ರಂದು ನಗರದ ಜಿಲ್ಲಾ ರಂಗಂಮದಿರದಲ್ಲಿ ಯುವ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಯುವಕರಿಗೆ ಆಫ್ಲೈನ್, ಆನ್ಲೈನ್ ಕಾರ್ಯಕ್ರಮಗಳ ಮೂಲಕ ಸುಮಾರು 50 ಕ್ಕೂ ಹೆಚ್ಚು ವಿವಿಧ ಚಟುವಟಿಕೆ, ಸ್ಪರ್ಧೆ, ಹಾಡುಗಾರಿಕೆ, ನೃತ್ಯ ಮತ್ತು ಆಹಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಯುವಕರಿಗೆ ಅನುಕೂಲವಾಗುವಂತೆ ಏ.27 ರಂದು ಅಮೃತ ಓರಾದಲ್ಲಿ ಮಾನಸಿಕ ಆರೋಗ್ಯ, ಪ್ರೀತಿ ಮತ್ತು ಸಂಬಂಧ ಹಾಗೂ ವೃತ್ತಿ ಮತ್ತು ಉದ್ಯಮಶೀಲತೆ ಕುರಿತು ಯುವ ಶೃಂಗಸಭೆ ಹಾಗೂ ಸಂವಾದ ನಡೆಯಲಿದ್ದು ನುರಿತರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಈಗಾಗಲೇ 200ಕ್ಕೂ ಅಧಿಕ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಮುಖ್ಯ ಕಾರ್ಯಕ್ರಮ ಏ.29ಕ್ಕೆ ಸಂಜೆ 5 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ. ಇದೇ ವೇಳೆ ಜಾನಪದ ಸಂಸ್ಕೃತಿ ಪ್ರದರ್ಶನ, ಲೈವ್ ಬ್ಯಾಂಡ್ ಪ್ರದರ್ಶನ ನಡೆಯಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಚಿತವಾಗಿ ನೋಂದಣಿ ಆನ್ಲೈನ್ ಹಾಗೂ ಆಪ್ಲೈನ್ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ತಂಡದ ಪ್ರಮುಖರಾದ ಸ್ವರೂಪ ತಳೇಕರ್, ಚೇತನಾ ಕೋಲ್ವೇಕರ್, ಅಶ್ವಿನ್ ಪಡವಳಕರ್, ವರುಣ್ ನಾಯ್ಕ, ಕ್ರಿಸ್ ಅಲ್ಮೇಡಾ, ದೀಪಕ ರೇವಣಕರ್, ಶ್ರೇಯಾ ನಾಯ್ಕ, ಶ್ರದ್ಧಾ ಕೋಲ್ವೇಕರ್, ಲಕ್ಷಿತಾ ಅಣ್ವೇಕರ್, ಅನುಶ್ರೇಯಾ ನಾಯ್ಕ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು