News Karnataka Kannada
Sunday, April 28 2024
ಉತ್ತರಕನ್ನಡ

ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಸಹಾಯ ಜನ ಮರೆತಿಲ್ಲ: ಭೀಮಣ್ಣ ನಾಯ್ಕ

People have not forgotten the little help done by Congress in times of crisis: Bheemanna Naik
Photo Credit : By Author

ಕಾರವಾರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಶಿರಸಿ ತಾಲೂಕಿನ ಧೋರಣಗಿರಿ, ಕಕ್ಕಳ್ಳಿ, ಶಿರಗುಣಿ ಭಾಗದಲ್ಲಿ ಪ್ರಚಾರ ಸಭೆ ನಡೆಸಿ ಇದೇ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭೀಕರ ಮಳೆಗೆ ಮನೆ ಹಿಂದಿನ ಗುಡ್ಡವೇ ಕುಸಿದು ಬಂದು ಜೊತೆಗೆ ಅಡಿಕೆ ತೋಟ, ಮನೆಗಳೂ ಹಾನಿಯಾದವು. ಕೊರೋನಾದಂತಹ ಸಂಕಷ್ಟದಲ್ಲಿ ಜನರ ಬದುಕು ಬವಣೆ ಆಗಿತ್ತು. ಶಿರಸಿಗೆ ಬಂದಿದ್ದ ಜಾತ್ರೆಯ ವರ್ತಕರೂ, ನಮ್ಮ ನಗರ ಹಾಗೂ ಗ್ರಾಮೀಣ ಭಾಗದವರೂ ಅನೇಕ ಸಮಸ್ಯೆ ಎದುರಿಸಿದರು. ಅವರಿಗೆಲ್ಲ ಕೊರೋನಾ ನಿಯಂತ್ರಣಕ್ಕೆ ಸರಕಾರ ನಿಬಂಧನೆ ಹೇರಿತು. ಆದರೆ, ಅವರಿಗೆ ಊಟದ ಸಮಸ್ಯೆ ಆದಾಗ, ಉಳಿಯಲು ಮನೆಯೇ ಇಲ್ಲದಾಗ ಕೇಳದ ಸ್ಥಿತಿ ಬಂದಿತು. ಹೊಳೆ ಮನೆ ಮುಳುಗಿಸಿತು. ತಕ್ಷಣ ಉಳಿಯಲು ತಗಡಿನ ಶೆಡ್ ಆದರೂ ಬೇಕಿತ್ತು. ಇಂಥ ವೇಳೆ ಕಾಂಗ್ರೆಸ್ ಮಾಡಿದ ಅಲ್ಪ ಸಹಾಯವನ್ನೂ ಜನ ಮರೆತಿಲ್ಲ. ಹಾಗೆಂದು ನೆನಪಿಡಲಿ ಎಂದು ನೆರವು ಮಾಡಿದ್ದಲ್ಲ ಎಂದರು.

ಕಾಂಗ್ರೆಸ್ ಎಂದರೆ ಹೈಟೆಕ್ ಪಕ್ಷವಲ್ಲ. ದೆಹಲಿಯಲ್ಲಿ ಕುಳಿತು ಕರ್ನಾಟಕ ಸರಕಾರ ನಡೆಸುವದಿಲ್ಲ. ಬದಲಿಗೆ ಜನ ಸಾಮಾನ್ಯರ ಪಕ್ಷ. ಜನರ ಸರಕಾರ ಹೇಗಿರುತ್ತದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತಗಳೇ ಉದಾಹರಣೆ. ಸರಕಾರದಿಂದ ಜನರಿಗೆ ಬಲ ತುಂಬಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಎಂ. ಏನ್. ಭಟ್ಟ , ಜಿ. ಏನ್. ಹೆಗಡೆ ಮೂರೇಗಾರ್, ಶಶಿಕಲಾ ನಾಯ್ಕ್, ಶ್ರೀನಿವಾಸ ನಾಯ್ಕ್, ಅರುಣ ಗೌಡ, ಶ್ರೀಪಾದ ಹೆಗಡೆ ಕಡವೆ, ಕುಮಾರ ಜೋಶಿ, ನಾಗರಾಜ ಮುರ್ಡೇಶ್ವರ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು