News Karnataka Kannada
Sunday, May 12 2024
ಉತ್ತರಕನ್ನಡ

ಕಾರವಾರ: ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಗೆ ಮುಂದಾಗಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

Cen Police
Photo Credit : By Author

ಕಾರವಾರ: ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಗೆ ಮುಂದಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

ಅರ್ಗಾ ನೇವಲ್ ಬೇಸ್‌ನ ರಾಜಕುಮಾರ ಸಿಂಗ್ ವಂಚನೆಗೊಳಗಾಗಿದ್ದು, ಅವರ ಮೊಬೈಲ್ ನಂಬರಿಗೆ ವಿದ್ಯುತ್ ಬಿಲ್ ಪಾವತಿಸುವಂತೆ ಎಸ್.ಎಮ್.ಎಸ್ ಬಂದಿದ್ದು, ರಾತ್ರಿಯೊಳಗೆ ಪಾವತಿ ಆಗದೇ ಇದ್ದರೆ ಸಂಪರ್ಕ ಕಡಿತ ಮಾಡುವುದಾಗಿ ಉಲ್ಲೇಖಿಸಲಾಗಿತ್ತು.

ಹೀಗಾಗಿ ರಾಜಕುಮಾರ ಎಸ್.ಎಂ.ಎಸ್.ನಲ್ಲಿ ನಮೂದಿಸಿದ 8250412470 ಸಂಖ್ಯೆಗೆ ಕರೆ ಮಾಡಿದ್ದು, ಆ ಕಡೆಯಿಂದ ಮಾತನಾಡಿದ ವ್ಯಕ್ತಿಯು ಟಿಮ್ ವಿವರ್ ಆಪ್ ಮೊಬೈಲ್‌ನಲ್ಲಿ ಅಳವಡಿಸಿಕೊಳುವಂತೆ ಹೇಳಿದ್ದಾನೆ.

ಅದೇ ರೀತಿ ಮಾಡಿದ ರಾಜಕುಮಾರಗೆ ಆರೋಪಿ ವಾಟ್ ಆ್ಯಪ್ ವಿಡಿಯೋ ಕರೆ ಮೂಲಕ ಸಂಪರ್ಕಿಸಿ ಅವರ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡಗಳನ್ನು ತೋರಿಸುವಂತೆ ತಿಳಿಸಿದ್ದಾನೆ.

ತಮ್ಮ ಏಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮತ್ತು ಎಸ್.ಬಿ.ಐ ಬ್ಯಾಂಕಿನ ಡೆಬಿಟ್ ಕಾರ್ಡನ್ನು ತೋರಿಸಿದ್ದು ನಂತರ ರಾಜಕುಮಾರ ಎಸ.ಬಿ.ಐ ಖಾತೆಯಿಂದ 14,165.20 ಹಾಗೂ ಏಕ್ಸಿಸ್ ಬ್ಯಾಂಕ ಡೆಬಿಟ್ ಕಾರ್ಡನಿಂದ 99,1092 ಹಾಗೂ ಕ್ರೆಡಿಟ್‌ ಕಾರ್ಡ್ ನಿಂದ 2,19,985.45 ಹೀಗೆ ಒಟ್ಟು 3,33,259,85 ರೂ. ಹಣವನ್ನು ದೋಚಿದ್ದಾನೆ. ಈ ಬಗ್ಗೆ ಸೈಬರ್ ಕ್ರೈಮ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು