ಕಾರವಾರ: ನಗರದ ಸೇಂಟ್ ಮೈಕಲ್ ಶಾಲೆಯಲ್ಲಿ ತೆರೆಯಲಾಗಿದ್ದ ಮತ ಕೇಂದ್ರದಲ್ಲಿ ಯುವತಿಗೆ ಮೊದಲ ಮತದಾನ ಮಾಡಿದ ಸಂಭ್ರಮ. ನಗರದ ಎಲಿಜಾ ಗೋನ್ಸಾಲ್ವಿಸ್ ಯುವತಿ ತಮ್ಮ ಮೊದಲ ಮತದಾನ ಮಾಡಿ ಹರ್ಷ ವ್ಯಕ್ತಿಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಲಿಜಾ ತಾನು ಮೊದಲ ಮತದಾನ ಮಾಡುವ ಮೂಲಕ ಹಕ್ಕು ಚಲಾಯಸಿದ್ದೇನೆ. ಖುಷಿಯಾಗುತ್ತಿದೆ. ಯುವ ಮತದಾರರು ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕು. ಸೇಂಟ್ ಮೈಕಲ್ ಶಾಲೆಯಲ್ಲಿ ಮೂರು ಮತಗಟ್ಟೆಯನ್ನು ತೆರೆಯಲಾದ್ದು ತಮ್ಮ ಮತಚಲಾಯಿಸಲು ಜನರು ಬೆಳಗ್ಗೆಯೇ ಆಗಮಿಸಿದ್ದಾರೆ.
ಆಗಮಿಸಿ ಜನರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಮತದಾರರ ಗಮನ ಸೆಳೆಯಲು ಮತಗಟ್ಟೆಯ ಬಳಿ ಬಲೂನ್ ಗಳಿಂದ ಶೃಂಗರಿಸಲಾಗಿತ್ತು. ಪೊಲೀಸರು ಭದ್ರತೆಗಳನ್ನು ಕಲ್ಪಿಸಿದ್ದರು.