News Karnataka Kannada
Monday, May 06 2024
ಉತ್ತರಕನ್ನಡ

ಕಾರವಾರ: ಕಾಮನ್‌ವೆಲ್ತ್ ನಲ್ಲಿ ಮೂರು ಚಿನ್ನದ ಪದಕ ವಿಜೇತೆ ಪ್ರತೀಕ್ಷಾಗೆ ಸನ್ಮಾನ

Three commonwealth games gold medallist Pratiksha felicitated
Photo Credit : By Author

ಕಾರವಾರ: ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದ ತಾಲೂಕಿನ ಐಎನ್‌ಎಸ್ ಕದಂಬ ನೌಕಾನೆಲೆಯ ಉದ್ಯೋಗಿ ಗೀತಾ ಜಿ.ನಾಯ್ಕ ಅವರ ಪುತ್ರಿ ಪ್ರತೀಕ್ಷಾ ಜಿ. ನಾಯ್ಕ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು.

ಪ್ರತೀಕ್ಷಾ ಅವರು ಅವರು 84 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಮಹಿಳೆಯರ ಕ್ಲಾಸಿಕ್ ಬೆಂಚ್ ಪ್ರೆಸ್, ಇಕ್ವಿಪ್ಡ್ ಬೆಂಚ್ ಪ್ರೆಸ್ ಮತ್ತು ಇಕ್ವಿಪ್ಡ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇವರ ಈ ಸಾಧನೆಗೆ ಶುಕ್ರವಾರ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ಅರಗಾದ ನೌಕಾನೆಲೆಯ ಪ್ರಧಾನ ಕಛೇರಿಯಲ್ಲಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಪ್ರತೀಕ್ಷಾ ಅವರ ಸಾಧನೆಗಳು ಭಾರತದ ಎಲ್ಲಾ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಬಹುದೊಡ್ಡ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತೀಕ್ಷಾ ನಾಯ್ಕ ಅವರು ಕಾರವಾರ ನೌಕಾನೆಲೆಯ ಕೇಂದ್ರೀಯ ವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಅವರ ತಾಯಿ ಗೀತಾ ಜಿ ನಾಯ್ಕ್ 2006 ರಿಂದ ಕಾರವಾರದ ಮೆಟೀರಿಯಲ್ ಆರ್ಗನೈಸೇಶನ್‌ನಲ್ಲಿ ರಕ್ಷಣಾ ನಾಗರಿಕರಾಗಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರ ತಂದೆ ಗಣಪತಿ ಎಂ. ಎಸ್. ಶಿವಮೊಗ್ಗದ ಹಳ್ಳಿಯಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತೀಕ್ಷಾ ಅವರು ಬಾಲ್ಯದಿಂದಲೂ ಸಕ್ರಿಯ ಕ್ರೀಡಾಪಟುವಾಗಿದ್ದು ಕುಟುಂಬದ ಪ್ರೇರಣೆಯೊಂದಿಗೆ 2018 ರಲ್ಲಿ ಪವರ್ಲಿಫ್ಟಿಂಗ್ ಆರಂಭಿಸಿದ್ದರು. ಮೂರು ಚಿನ್ನದ ಪದಕಗಳನ್ನು ಮತ್ತು ಅತ್ಯುತ್ತಮ ಒಟ್ಟಾರೆ ಜೂನಿಯರ್ ಮಹಿಳಾ ಲಿಫ್ಟರ್ ಪ್ರಶಸ್ತಿಯನ್ನು ಗೆದ್ದು ದೇಶಕ್ಕೆ ಮತ್ತು ಭಾರತೀಯ ನೌಕಾಪಡೆಗೆ ಹೆಮ್ಮೆ ತಂದಿದ್ದಾರೆ ಎಂದು ನೌಕಾ ಪಡೆ ಅಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು