News Karnataka Kannada
Tuesday, May 07 2024
ಉತ್ತರಕನ್ನಡ

ಕಾರವಾರ: ಸಂಚಾರ ಪೊಲೀಸ್ ಚೌಕಿ ಉದ್ಘಾಟಿಸಿದ ಎಸ್ಪಿ ಡಾ.ಸುಮನ ಪೆನ್ನೇಕರ್

Kar
Photo Credit : By Author

ಕಾರವಾರ: ನಗರದ ಸಂಚಾರ ಪೊಲೀಸ್ ಠಾಣೆಯ 10 ಪೊಲೀಸ್ ಚೌಕಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಉದ್ಘಾಟಿಸಿದರು.

ಕಾರವಾರ ನಗರದಲ್ಲಿ ವರ್ಷವಿಡೀ ಸಂಚಾರ ದಟ್ಟಣೆ ಇದ್ದು, ಹೆಚ್ಚು ಬಿಸಿಲು ಕೂಡ ಇರುವುದರಿಂದ ಸಂಚಾರ ಪೊಲೀಸರು ದಣಿವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೀಗಾಗಿ ಸಿಬ್ಬಂದಿಗೆ ಕೊಂಚ ಆರಾಮದಾಯಕವಾಗಿ ಕರ್ತವ್ಯ ನಿರ್ವಹಿಸಲು ಅಗತ್ಯವಾಗಿದ್ದ ಪೊಲೀಸ್ ಚೌಕಿಗಳನ್ನ ದಾನಿಗಳು, ಸಂಘ- ಸಂಸ್ಥೆಗಳ ಸಹಕಾರದಿಂದ ನಿರ್ಮಿಸಲಾಗಿದ್ದು, ಆಯಾ ಕಟ್ಟಿನ ಜಾಗದಲ್ಲಿ ಸ್ಥಾಪಿಸಲಾಗುತ್ತದೆ.

ಸೋಮವಾರ ಸಂಚಾರ ಪೊಲೀಸ್ ಠಾಣೆಯ ಎದುರು ಎಸ್ಪಿ ಪೆನ್ನೇಕರ್ ಅವರು 10 ಚೌಕಿಗಳ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ, ತಮ್ಮ ಸಿಬ್ಬಂದಿಗಳಿಗಾಗಿ ಚೌಕಿಗಳನ್ನ ನಿರ್ಮಿಸಿಕೊಡುವ ಯೋಜನೆ ರೂಪಿಸಿ ಸಾಕಾರಗೊಳಿಸಿದ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ವಿವಿಧ ಹಂತದ ಅಧಿಕಾರಿ ವರ್ಗದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು