News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಗಡಿ ಪ್ರದೇಶದಲ್ಲಿ ಮತಯಾಚನೆ ಮಾಡಿದ ಶಾಸಕಿ ರೂಪಾಲಿ ನಾಯ್ಕ

Mla Rupali Naik seeks votes in border areas
Photo Credit : News Kannada

ಕಾರವಾರ: ತಾಲೂಕಿನ ಗಡಿಯಲ್ಲಿರುವ ಗೋಟೆಗಾಳಿ ಸಮೀಪದ ಲಾಂಡೆ, ಬಾಳ್ನಿ, ಹಾಗೂ ಗೋಯರ್ ಸೇರಿದಂತೆ ವಿವಿಧೆಡೆ ಜನರಿಗೆ ಅವಶ್ಯಕವಾದ ಕೆಲಸಗಳನ್ನು ಮಾಡಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಆಶೀರ್ವಾದ ಮಾಡುವಂತೆ ಶಾಸಕಿ ರೂಪಾಲಿ ಎಸ್. ನಾಯ್ಕ ವಿನಂತಿಸಿದರು.

ತಾಲ್ಲೂಕಿನ ಗೋಟಗಾಳಿ ಭಾಗದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು. ಗಡಿ ಪ್ರದೇಶದಲ್ಲಿರುವ ಲಾಂಡೆ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮೆಲ್ಲರ ಮತದಿಂದ ನಾನು ಮತ್ತೊಮ್ಮೆ ಆಯ್ಕೆಯಾಗಿ ಆ ಎಲ್ಲಾ ಯೋಜನೆಗಳನ್ನು ಪೂರೈಸುತ್ತೇನೆ ಎಂದು ಭರವಸೆ ನೀಡಿದರು.

ಸಾರ್ವಜನಿಕರು ಮಾತನಾಡಿ ಯಾವುದೇ ಶಾಸಕರು ಮಾಡದ ಅಭಿವೃದ್ಧಿ ಕೆಲಸವನ್ನು ರೂಪಾಲಿ ಎಸ್. ನಾಯ್ಕ ಅವರು ಮಾಡಿದ್ದಾರೆ. ಹಿಂದೆ ಯಾವ ಶಾಸಕರೂ ಸಹ ನಮ್ಮ ಕಷ್ಟಗಳಿಗೆ ಸ್ಪಂದಿಸಲಿಲ್ಲ ಆದರೆ ಮಾತೃಹೃದಯಿ ರೂಪಾಲಿ ನಾಯ್ಕರವರು ನಮ್ಮ ಕಷ್ಟಗಳಿಗೆ ಸ್ಪಂದಿಸಿದರು.

ಹಿಂದೆಂದೂ ಬಸ್ ನ್ನೇ ಕಾಣದ ನಮ್ಮಊರು ಈಗ ಬಸ್ ಸೌಕರ್ಯವನ್ನು ಹೊಂದಿದೆ. ನೀರಿನ ಸಮಸ್ಯೆಯಿಂದ ವರ್ಷಾನುಗಟ್ಟಲೆ ಹಿಂದಿನ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸಲಿಲ್ಲ ಆದರೆ ರೂಪಾಲಿ ನಾಯ್ಕ ಶಾಸಕಿಯಾದ ಕಡಿಮೆ ಅವಧಿಯಲ್ಲಿ ನಮ್ಮೆಲ್ಲರ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ ಮುಂದೆಯೂ ಅನೇಕ ಕಾಮಗಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಅವರೇ ಮಾಡಲಿದ್ದಾರೆ ಹಾಗೆಯೇ ಅವೆಲ್ಲ ಉದ್ಘಾಟನೆಯೂ ಅವರ ಕೈ ಇಂದಲೇ ಆಗಬೇಕು. ನಮ್ಮ ಕಷ್ಟದ ಸಮಯದಲ್ಲಿ ಸ್ಪಂದಿಸಿದ ರೂಪಾಲಿ ನಾಯ್ಕರವರನ್ನೇ ನಾವು ಬೆಂಬಲಿಸಲಿದ್ದೇವೆ ಈ ಬಾರಿ ನಾವು ಬಿಜೆಪಿ ಸರಕಾರವನ್ನೇ ಬೆಂಬಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ನಗರಸಭೆ ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ ಹಾಗೂ ಪ್ರಮುಖರಾದ ಬಾಬು ನಾಯ್ಕ, ಸುಧಾಕರ, ಅನಿಲ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು