News Karnataka Kannada
Saturday, April 27 2024
ಉತ್ತರಕನ್ನಡ

ಕಾರವಾರ: ರೂಪಾಲಿ ನಾಯ್ಕ ಪ್ರಯತ್ನದಿಂದ ದೇವಾಲಯಗಳ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ

Karwar: With the efforts of Rupali Naik, rs 5 crore has been sanctioned for the development of temples. Release
Photo Credit : By Author

ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ವಿಶೇಷ ಪ್ರಯತ್ನದಿಂದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 27 ದೇವಾಲಯಗಳ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ.

ಈ ಹಿಂದೆ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದೀಗ 5 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಬಿಡುಗಡೆಯಾದಂತಾಗಿದೆ.

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಇಷ್ಟೊಂದು ಅನುದಾನವನ್ನು ಶಾಸಕರು ತಂದಿರುವುದು ಗಮನಾರ್ಹವಾಗಿದೆ.

ಇದೀಗ ಬಿಡುಗಡೆಯಾದ 5 ಕೋಟಿ ರೂ.ಗಳಲ್ಲಿ ಕೈಗೊಳ್ಳುವ ದೇವಾಲಯಗಳ ವಿವರ ಈ ಕೆಳಗಿನಂತಿದೆ. ಅಂಕೋಲಾ ಕಣಕಣೇಶ್ವರ ದೇವಸ್ಥಾನ 35 ಲಕ್ಷ ರೂ, ತೋಡುರು ಗೋವಿಂದ ದೇವಸ್ಥಾನ 25 ಲಕ್ಷ ರೂ, ಕಾರವಾರ ಅಳ್ವೆವಾಡದ ನರಸಿಂಹ ದೇವಸ್ಥಾನ ಅಭಿವೃದ್ಧಿ 25 ಲಕ್ಷ ರೂ, ಶೆಟಗೇರಿ ಹಡವ ದೇವಸ್ಥಾನ ಅಭಿವೃದ್ಧಿ 15 ಲಕ್ಷ ರೂ, ಅಮದಳ್ಳಿ ಮಹಾಸತಿ ದೇವಸ್ಥಾನ ಅಭಿವೃದ್ಧಿ 50 ಲಕ್ಷ ರೂ, ಚೆಂಡಿಯಾ ಅಂಬಾಭವಾನಿ ದೇವಸ್ಥಾನ ಅಭಿವೃದ್ಧಿ 21 ಲಕ್ಷ ರೂ, ಅಂಕೋಲಾ ಶಡಗೇರಿ ಕಾಳಮ್ಮದೇವಸ್ಥಾನ ಅಭಿವೃದ್ಧಿ 25 ಲಕ್ಷ ರೂ, ಶಿರವಾಡ ದೇವತಿ ದೇವಸ್ಥಾನ ಅಭಿವೃದ್ಧಿ 25 ಲಕ್ಷ ರೂ, ಬೊಬ್ರುವಾಡ ತೆಂಕಣಕೇರಿ ವೆಂಕಟರಮಣ ದೇವಸ್ಥಾನ ಅಭಿವೃದ್ಧಿ 10 ಲಕ್ಷ ರೂ, ಬೊಬ್ರುವಾಡ ಬೊಬ್ರು ದೇವಸ್ಥಾನ ಅಭಿವೃದ್ಧಿ 6 ಲಕ್ಷ ರೂ, ಹಾರವಾಡ ದುರ್ಗಾದೇವಿ ದೇವಸ್ಥಾನ ಅಭಿವೃದ್ಧಿ 50 ಲಕ್ಷ ರೂ, ಹಿಲ್ಲೂರಬೈಲ್ ನಂದಿಕೇಶ್ವರ ದೇವಸ್ಥಾನ ಅಭಿವೃದ್ಧಿ10 ಲಕ್ಷ ರೂ, ಬೆಳಸೆ ದುರ್ಗಾದೇವಿ ದೇವಸ್ಥಾನ ಅಭಿವೃದ್ಧಿ 30 ಲಕ್ಷ ರೂ, ಸಗಡಗೇರಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ 15 ಲಕ್ಷ ರೂ, ಶಿರ್ವೆ ಶ್ರೀ ನಾರಾಯಣ ದೇವಸ್ಥಾನ ಅಭಿವೃದ್ಧಿ 25 ಲಕ್ಷ ರೂ, ಬರಗಲ್ ಶ್ರೀ ಮಹಾದೇವ ದೇವಸ್ಥಾನ ಅಭಿವೃದ್ಧಿ 10 ಲಕ್ಷ ರೂ, ಉಳಗಾ ಶ್ರೀ ನಾರಾಯಣ ಮಹಾದೇವ ದೇವಸ್ಥಾನ ಅಭಿವೃದ್ಧಿ 5 ಲಕ್ಷ ರೂ, ಅಸ್ನೋಟಿ ಶ್ರೀ ಕಾಮಾಕ್ಷೀ ರಾಜೇಶ್ವರ ಗಣಪತಿ ದೇವಸ್ಥಾನ ಅಭಿವೃದ್ಧಿ 5 ಲಕ್ಷ ರೂ, ಮಲ್ಲಾಪುರ ಶ್ರೀ ಮಹಾದೇವ ದೇವಸ್ಥಾನ ಅಭಿವೃದ್ಧಿ 10 ಲಕ್ಷ ರೂ, ಬಾಳ್ನಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿ 10 ಲಕ್ಷ ರೂ, ಅಂಕೋಲಾ ಪುರಸಭೆ ವ್ಯಾಪ್ತಿಯ ವಿಠ್ಠಲ ಸದಾಶಿವ ದೇವಾಲಯ ಅಭಿವೃದ್ಧಿ 10 ಲಕ್ಷ ರೂ, ಕೇಣಿ ದತ್ತಾತ್ರೇಯ ದೇವಾಲಯ ಅಭಿವೃದ್ಧಿ 15 ಲಕ್ಷ ರೂ, ಕಾರವಾರ ನಗರಸಭೆ ವ್ಯಾಪ್ತಿಯ ರಾಘವೇಂದ್ರ ಮಠ ಅಭಿವೃದ್ಧಿ 10 ಲಕ್ಷ ರೂ, ಮಂಜಗುಣಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ ತಾರಿಜಟಕ ದೇವಸ್ಥಾನ ಅಭಿವೃದ್ಧಿ 15 ಲಕ್ಷ ರೂ, ದೇವಳಮಕ್ಕಿ ಶ್ರೀ ನಾರಾಯಣ ಮಹದೇವ ದೇವಾಲಯ ಅಭಿವೃದ್ಧಿ 10 ಲಕ್ಷ ರೂ, ಅಂಕೋಲಾ ಪುರಸಭೆ ವ್ಯಾಪ್ತಿಯ ಕಾನಮ್ಮ ದೇವಾಲಯ ಅಭಿವೃದ್ಧಿ 28 ಲಕ್ಷ ರೂ ಹಾಗೂ ಚಿತ್ತಾಕುಲ ದೇವಬಾಗ ನರಸಿಂಹ ದೇವಸ್ಥಾನ ಅಭಿವೃದ್ಧಿ (ಅಂಬಿಗ ಸಮಾಜ) 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ.

ಈಗಾಗಲೆ ಬಿಡುಗಡೆಯಾದ ಅನುದಾನದ ಬಹುತೇಕ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು