News Karnataka Kannada
Saturday, April 27 2024
ಉತ್ತರಕನ್ನಡ

ಕಾರವಾರ: ಪಾಕಿಸ್ತಾನಿ ಮಹಿಳೆಯನ್ನು ಕರೆತಂದು ವಿಸಾ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗೆ ಜೈಲು

Ex-DGP sentenced to three years in jail for sexually harassing woman officer
Photo Credit : Pixabay

ಕಾರವಾರ: ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯನ್ನು ವಿವಾಹವಾಗಿ ಭಾರತಕ್ಕೆ ಕರೆ ತಂದ ಭಟ್ಕಳದ ಪತಿಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯವು ವಿಸಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿ ಮಹ್ಮದ್ ಇಲಿಯಾಸ್ ಹಾಗೂ ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಮಹ್ಮದ್ ಇಲಿಯಾಸ್ ಈತನು 2014 ರ ಜೂನ್ 17 ರಂದು ಸ್ಥಳೀಯ ಭಟ್ಕಳ ಪೊಲೀಸ್ ಠಾಣೆಗೆ ಹಾಗೂ ಕಾರವಾರದ ಎಫ್.ಆರ್.ಓ. ರವರಿಗೆ ಮಾಹಿತಿ ನೀಡದೇ ಪಾಕಿಸ್ತಾನಿ ಪ್ರಜೆಯಾದ ತನ್ನ ಪತ್ನಿಯನ್ನು ವೀಸಾ ವಿಸ್ತರಣೆಯ ಕುರಿತು ಭಟ್ಕಳದಿಂದ ದೆಹಲಿಗೆ ಕರೆದೊಯ್ದು ವಿದೇಶಿ ಕಾಯ್ದೆಯಂತೆ ವಿಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಭಟ್ಕಳ ನಗರ ಠಾಣೆಯ ಪಿಐ ಪ್ರಶಾಂತ ಎಸ್. ನಾಯಕ ಅವರು ಈ ಕುರಿತು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ ಅವರು ಆರೋಪಿ ಮಹ್ಮದ್ ಇಲಿಯಾಸ್ ಈತನಿಗೆ 1 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ಹಾಗೂ ಆರೋಪಿ ನಾಸಿರಾಳಿಗೆ 6 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ತನುಜಾ ವಿ. ಹೊಸಪಟ್ಟಣ ಅವರು ವಾದವನ್ನು ಮಂಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು