News Karnataka Kannada
Friday, May 03 2024
ಉತ್ತರಕನ್ನಡ

ಕಾರವಾರ: ಕಡಲ ತೀರದಲ್ಲಿ ಡಾಲ್ಫಿನ್ ನ ಕಳೇಬರ ಪತ್ತೆ

Karwar: Dolphin's carcass found on beach
Photo Credit : News Kannada

ಕಾರವಾರ: ಇಲ್ಲಿನ ಕಡಲತೀರದಲ್ಲಿ ಮಂಗಳವಾರ ಇಂಡೊ ಫೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ನ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಾರವಾರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಪ್ರಶಾಂತ ಕುಮಾರ್ ಕೆ. ರವರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತ ಡಾಲ್ಫಿನ್ ಗಂಡಾಗಿದ್ದು, ಸುಮಾರು 7 ರಿಂದ 8 ತಿಂಗಳ ಮರಿಯಾಗಿದೆ. ತಲೆಯ ಒಳಗೆ ಆಂತರಿಕ ಗಾಯ ಕಂಡು ಬಂದಿದ್ದು, ಯಾವುದೋ ಘನವಸ್ತುವಿನ ಘರ್ಷಣೆಯಿಂದ ಸಾವು ಸಂಬವಿಸಿರಬಹುದು ಎಂದು ಅಂದಾಜಿಸಲಾಗಿದೆ. ಡಾಲ್ಫಿನ್‌ಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನುಭಂದ 1 ರಲ್ಲಿ ಸಂರಕ್ಷಿಸಲ್ಪಟ್ಟ ಜೀವಿ ಪ್ರಭೇದಗಳಾಗಿದ್ದು, ಕಾರವಾರ ಭಾಗದಲ್ಲಿ ಇವುಗಳ ಸಂಖ್ಯೆ ಇತ್ತಿಚಿಗೆ ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೋಸ್ಟಲ್ ಮತ್ತು ಮರೈನ್ ನ ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ ಬಿ., ರೀಪ್ ವಾಚ್ ಕುಂದಾಪುರದ ಡಾ. ತೇಜಸ್ವಿನಿ, ವಿಜ್ಞಾನ ಉಪಕೇಂದ್ರದ ಡಾ. ಸಂಜೀವ ದೇಶಪಾಂಡೆ, ಸಂಶೋಧನಾ ವಿದ್ಯಾರ್ಥಿ ಶಾನ ನವಾಜ್, ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ ಕಟ್ಟಿಮನಿ, ಅರಣ್ಯ ಪಾಲಕರಾದ ಅರುಣಕುಮಾರ್, ಮಲ್ಲೇಶ, ಹನಮಂತ ಡೊಕ್ಕಣ್ಣನವರ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು