News Karnataka Kannada
Friday, May 03 2024
ಉತ್ತರಕನ್ನಡ

ಕಾರವಾರ: 16 ಲಕ್ಷ ಮೌಲ್ಯದ 75 ಕೆಜಿ ಮಾದಕ ದ್ರವ್ಯ ನಾಶ

Untitled 1 Recovered
Photo Credit :
ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಒಟ್ಟು 69 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 75 ಕ್ಕೂ ಹೆಚ್ಚು ಕೆಜಿ ತೂಕದ ಮಾದಕ ದ್ರವ್ಯಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಫೆನ್ನೇಕರ್ ಸಮ್ಮುಖದಲ್ಲಿ ಪೊಲೀಸರು ನಾಶಪಡಿಸಿದ್ದಾರೆ.
ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಕಳೆದೊಂದು ವರ್ಷದ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಶಕ್ಕೆ ಪಡೆಯಲಾಗಿದ್ದ ಮಾಧಕ ದೃವ್ಯಗಳನ್ನು ಅಂಕೋಲಾ ತಾಲ್ಲೂಕಿನ ಬೊಗ್ರಿಬೈಲ್ ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ಸುಮನ್ ಪೆನ್ನೇಕರ್, ವಿಲೇವಾರಿ ಸಮಿತಿ ಸದಸ್ಯರು ಹಾಗೂ ಪಂಚರ ಸಮ್ಮುಖದಲ್ಲಿ ನಾಶಪಡಿಸಲಾಯಿತು .
ಒಟ್ಟು 64 ಪ್ರಕರಣಗಳಲ್ಲಿ ಸಿಕ್ಕಿದ್ದ 75.119 ಕೆಜಿ ಗಾಂಜಾ , ಒಂದು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ 195 ಗ್ರಾಂ ಚರಸ್, 4 ಪ್ರಕರಣಗಳಲ್ಲಿ ವಶಕ್ಕೆ ಪಡೆದ 61 ಗಾಂಜಾ ಗಿಡಗಳು ಸೇರಿ ಒಟ್ಟೂ 16,17,460 ಲಕ್ಷ ಮೌಲ್ಯದ 75.314 ಕೆಜಿ ಗಾಂಜಾವನ್ನು ಬೊಗ್ರಿಬೈಲ್ ಗ್ರಾಮದಲ್ಲಿರುವ ಕೆನರಾ ಐಎಂಎ ಕಾನ್ ಟ್ರೇಟ್‌ಮೆಂಟ್ ರವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾದಕವಸ್ತುಗಳನ್ನ ನಾಶಪಡಿಸಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು