ಶಿರಸಿ : ಆಧುನಿಕ ತಂತ್ರಜ್ಞಾನದ ಇಂದಿನ ದಿನಮಾನದಲ್ಲಿ ಸಮಾಜದಲ್ಲಿ ನಾನಾ ರೀತಿಯ ಬದಲಾವಣೆಗಳು ಆಗುತ್ತಿವೆ.
ಈ ಸಂದರ್ಭದಲ್ಲಿ ನಮ್ಮ ಕಲೆ ಸಂಸ್ಕೃತಿ ರಕ್ಷಣೆ ಅತ್ಯವಶ್ಯವಾಗಿದ್ದು ಪ್ರತಿಯೊಬ್ಬರೂ ಅದನ್ನು ಅರಿತು ಮುನ್ನಡೆಯಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಸುಂಧರಾ ಸಮೂಹ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆ-ಸಂಸ್ಕೃತಿಯನ್ನು ಉಳಿಸು ವಂತಹ ಕಾರ್ಯಚಟುವಟಿಕೆಗಳು ನಿರಂತರ ನಡೆಯುವಂತಾಗಬೇಕು. ಈ ದಿಸೆಯಲ್ಲಿ ಸಂಘಟನಾತ್ಮಕ ಪ್ರಯತ್ನ ಮತ್ತು ಕೊಡುಗೆ ಅತ್ಯಗತ್ಯವಾಗಿದೆ ಎಂದರು.