News Karnataka Kannada
Tuesday, April 30 2024
ಉತ್ತರಕನ್ನಡ

ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ಮಹಿಳೆ ತಿರುವನಂತಪುರದಲ್ಲಿ ಪತ್ತೆ

ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್  ದೇಶದ ಪ್ರವಾಸಿ ಮಹಿಳೆ ಎಮಿ ಯಮಾಝಕಿ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆ ಆಗಿದ್ದಾರೆ.
Photo Credit : News Kannada

ಕಾರವಾರ: ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್  ದೇಶದ ಪ್ರವಾಸಿ ಮಹಿಳೆ ಎಮಿ ಯಮಾಝಕಿ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆ ಆಗಿದ್ದಾರೆ.

ವಿಶೇಷ ತಂಡ ರಚಿಸಿದ್ದ ಪಿಎಸ್​ಐ ಖಾದರ್ ಬಾಷಾ, ಸುಧಾ ಅಘನಾಶಿನಿ ನೇತೃತ್ವದಲ್ಲಿ ಪತ್ತೆ ಮಾಡಲಾಗಿದೆ.

ಘಟನೆ ಏನು?: ಫೆ.4ರಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್​ನಲ್ಲಿ ಪತಿ ಜತೆ ತಂಗಿದ್ದರು. ಆದರೆ ಪತಿ ಮಲಗಿದ್ದ ವೇಳೆ ಅಂದರೆ ಫೆ.5ರ ಬೆಳಗ್ಗೆ 10.15ರ ಸುಮಾರಿಗೆ ಕಾಟೇಜ್​ನಿಂದ ಹೊರಬಂದಿದ್ದ ಎಮಿ ಯಮಾಝಕಿ ಬಳಿಕ ನಾಪತ್ತೆಯಾಗಿದ್ದರು.

ಎಮಿ ಪತಿ ದೈ ಯಮಾಝಕಿ ಗೋಕರ್ಣ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾದ ನಂತರ ಆನ್​ಲೈನ್​ನಲ್ಲಿ ಎಮಿ ಯಮಾಝಕಿ ಸಂಪರ್ಕದಲ್ಲಿದ್ದರು. ಮಹಿಳೆ ಪತಿಗೆ ಕಳುಹಿಸಿದ್ದ ಆನ್​ಲೈನ್ ಸಂದೇಶ ಆಧರಿಸಿ ತಂಡದೊಂದಿಗೆ ಕೇರಳಕ್ಕೆ ತೆರಳಿದ್ದ ಗೋಕರ್ಣ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಕರ್ಣದ ಕಾಟೇಜ್​ನಲ್ಲಿ ತಂಗಿದ್ದಾಗ ದಂಪತಿ ನಡುವೆ ಮನಸ್ತಾಪವಾಗಿತ್ತು. ಪತಿ ಮೇಲಿನ ಕೋಪದಿಂದ ರೈಲು ಹತ್ತಿ ಕೇರಳಕ್ಕೆ ತೆರಳಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು