News Karnataka Kannada
Sunday, April 28 2024
ಉತ್ತರಕನ್ನಡ

ಕಾರವಾರ: ಮಹಿಳೆಯರ ವಿಶೇಷ ಗ್ರಾಮ ಸಭೆ, ಹಾಗೂ ಉದ್ಯೋಗ ಸಬಲೀಕರಣ ಅಭಿಯಾನ

Women's Special Gram Sabha and Women's Employment Empowerment Campaign
Photo Credit : By Author

ಕಾರವಾರ: ಗ್ರಾಮದ ಜನರು, ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸಮರಗಪಕವಾಗಿ ತಲುಪಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಶ್ರಮಿಸಲಾಗುತ್ತಿದ್ದು, ಗ್ರಾಮಸ್ಥರು ಅಗತ್ಯ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು ಎಂದು ಸುಂಕಸಾಳ ಗ್ರಾಮ ಪಂಚಾಯತಿಯ ಅಧ್ಯಕ್ಷ ಸದಾನಂದ ನಾಯ್ಕ ಹೇಳಿದರು.

ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಬುಧವಾರ  ಜರುಗಿದ ಮಕ್ಕಳ, ಮಹಿಳೆಯರ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಉದ್ಯೋಗ ಸಬಲೀಕರಣ  ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ  ದೃಷ್ಟಿಯಿಂದ ನರೇಗಾದಡಿ ಬೇಡಿಕೆ ಪಟ್ಟಿ ತಯಾರಿಸಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ, ತಾಲೂಕಾ ಪಂಚಾಯತ್‌ನಿಂದ ಅನೇಕ ಆದೇಶಗಳು ಗ್ರಾಮ  ಪಂಚಾಯತ್‌ಗೆ ಬರುತ್ತವೆ. ಅಲ್ಲದೇ ಐಇಸಿ ಸಂಯೋಜಕರು ಹಾಗೂ ಗ್ರಾಪಂ ಸಿಬ್ಬಂದಿ ಯೋಜನೆಯ ಕುರಿತು ಜಾಗೃತಿ ಅಭಿಯಾನ, ತರಬೇತಿ ಕಾರ್ಯಗಾರ ನಡೆಸಿ ಕಾಲ ಕಾಲಕ್ಕೆ ಮಾಹಿತಿಯನ್ನು  ನೀಡುತ್ತಿದ್ದಾರೆ.

ಆದರೆ ಗ್ರಾಮೀಣ ಪ್ರದೇಶದ ಜನರು ತಮಗೆ ಬೇಕಾದ ಕಾಮಗಾರಿ ಹಾಗೂ ಕೆಲಸ  ಪಡೆಯಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿಲ್ಲ. ಹೀಗಾಗಿ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳುಗ್ರಾಮದಲ್ಲಿ ಸಂಚರಿಸಿ ಸ್ಥಳೀಯರನ್ನು ಮಾತನಾಡಿಸಿ ಸ್ವತಃ ತಾವೇ ಜನರಿಗೆ ಪೂರಕವಾದ ಕಾಮಗಾರಿ  ಕೈಗೊಂಡು ಗ್ರಾಮಸ್ಥರಿಗೆ ನರೇಗಾ ಯೋಜನೆಯ ಪ್ರಯೋಜನಗಳನ್ನು ಒದಗಿಸುತ್ತಿದ್ದಾರೆ. ಇನ್ನುಮುಂದೆ  ಆದರೂ ಗ್ರಾಮಸ್ಥರು ನರೇಗಾದಡಿ ಲಭ್ಯವಿರುವ ಅಗತ್ಯ ವೈಯಕ್ತಿ ಹಾಗೂ ಸಮುದಾಯ ಕಾಮಗಾರಿ  ಮತ್ತು ಕೂಲಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಫಾರ್ಮ್ ನಂ 6ರಲ್ಲಿ ಅರ್ಜಿ ಸಲ್ಲಿಸುವ ಮೂಲಕ  ಆರ್ಥಿಕ, ಸಾಮಾಜಿಕವಾಗಿ ವೃದ್ಧಿಯಾಗಬೇಕು ಎಂದರು.

ಮಹಿಳೆಯರು ಮಕ್ಕಳ ಹಿತದೃಷ್ಟಿಯಿಂದ ಗ್ರಾಮ ಪಂಚಾಯತಿ ಹಂತದಲ್ಲಿ ಹಲವು ಯೋಜನೆ  ರೂಪಿಸಿದ್ದು, ಆಧ್ಯತೆ ಮೇರೆಗೆ ಕೆಸ ಕಾರ್ಯ ನಿರ್ವಹಿಸಲಾಗುತ್ತಿದೆ.  ಇಂದಿನ ಮಕ್ಕಳ ಹಾಗೂ ಮಹಿಳಾ  ಗ್ರಾಮ ಸಭೆಯಲ್ಲಿ ಸಲ್ಲಿಕೆಯಾದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು  ಎಂದುತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಹೆಗಡೆ ಮಾತನಾಡಿ, ಹಳ್ಳಿಗಳ ಏಳಿಗೆಗೆ ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದ್ದು, ನರೇಗಾದಡಿ  ಶಾಲಾ ಸಮಗ್ರ ಅಭಿವೃದ್ಧಿ, ಪೌಷ್ಟಿಕ ಕೈತೋಟ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಅವಕಾಶವಿದೆ. ಆದರೆ ಅಂಗನವಾಡಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶವಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಚಿಕ್ಕ ಮಕ್ಕಳಿರುವುದರಿಂದ ಪೌಷ್ಟಿಕ ಕೈತೋಟ ಮತ್ತು  ಮಕ್ಕಳ ಸಂರಕ್ಷಣೆಗೆ ಪ್ರಮುಖವಾಗಿ ಕಾಂಪೌಂಡ್ ಅವಶ್ಯವಿದ್ದು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಜಿಲ್ಲಾ ಹಾಗೂ ತಾಲೂಕ ಪಂಚಾಯತ್ ಅಂಗನವಾಡಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ  ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್  ನಾಯ್ಕ್ ಮಾತನಾಡಿ, ಕೋವಿಡ್ ಸಂದರ್ಭದಿಂದ ಮಕ್ಕಳು ಆಕಸ್ಮಿಕ ಹಾಗೂ ಅನಿವಾರ್ಯವಾಗಿ  ಮೊಬೈಲ್ ಬಳಸುತ್ತಿದ್ದು, ಶೈಕ್ಷಣಿಕ ಪ್ರಗತಿ, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿಕೊಳ್ಳುವಂತಹ ಉತ್ತಮ ಕಾರ್ಯದತ್ತ ಹೆಚ್ಚು ಗಮನಹರಿಸಬೇಕು ಎಂದರು.

ತಾಲೂಕಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಂಘದ ಸದಸ್ಯರಿಗೆ ಹಾಗೂ ಶಾಲಾ ಶಿಕ್ಷಕರು, ಮಕ್ಕಳನ್ನ ಉದ್ದೇಶಿಸಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಳ, ಲಿಂಗತ್ವ  ಅಲ್ಪಸಂಖ್ಯಾತರಿಗೆ ಜಾಬ್ ಕಾರ್ಡ್ ವಿತರಣೆ, ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ  ಸಮುದಾಯ ಕಾಮಗಾರಿ, ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ, ಅಂಗನವಾಡಿ ಹಾಗೂಪೌಷ್ಟಿಕ ಕೈತೋಟ, ನರ್ಸರಿ, ಎನ್‌ಆರ್‌ಎಲ್‌ಎಂ ಶೆಡ್, ಕುರಿ, ಕೋಳಿ, ಮೇಕೆ ಶೆಡ್, ಕೃಷಿ ಹೊಂಡ, ಅಲ್ಪ ಆಳದ ಬಾವಿ, ಹೊಸ ತೋಟ ನಿರ್ಮಾಣದ ಕುರಿತು ಮಾಹಿತಿ ನೀಡಿ ಗ್ರಾಮ ಪಂಚಾಯತಿಗೆ  ಕಾಮಗಾರಿ ಹಾಗೂ ಕೆಲಸದ ಬೇಡಿಕೆ ಸಲ್ಲಿಸುಂತೆ ವಿವರಿಸಿದರು. ಜೊತೆಗೆ ಪ್ರತಿಯೊಬ್ಬರೂ ಇ-ಶ್ರಮ್ ಕಾರ್ಡ್ ಪಡೆದುಕೊಳ್ಳುವಂತೆ ತಿಳಿಸಿದರು.

ಸರಕಾರಿ ಪ್ರೌಢ ಶಾಲಾ ಶಿಕ್ಷಕರಾದ ಮೋಹನ್ ನಾಯ್ಕ ಅವರು ಮಕ್ಕಳ ವಿಶೇಷ ಗ್ರಾಮ ಸಭೆ ಅಂಗವಾಗಿ ಮಕ್ಕಳ ಹಕ್ಕು, ಕರ್ತವ್ಯ, ಜವಬ್ದಾರಿ ಕುರಿತು  ಉಪನ್ಯಾಸ ನೀಡಿದರು.

ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ನಾಯ್ಕ  ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಭಾ ಗೌಡ  ವಹಿಸಿದ್ದರು.

ಇದೇವೆಳೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ನರೇಗಾದಡಿ ಕೈಗೊಳ್ಳುವ ಪೌಷ್ಟಿಕ ಕೈತೋಟ, ಕಾಲು ಸಂಕ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪ್ರವೀಣ್ ನಾಯರ್, ಸುಜಾತ ಆಗೇರ, ಸಿಡಿಪಿಒ ಕಛೇರಿಯ  ಮೇಲ್ವಿಚಾರಕರಾದ ಗೌರಿ ಮಾರ್ಕಂಡೆ, ಸಿಹೆಚ್‌ಒ ಆಶಾ ಸಿದ್ದಿ, ಪಂಚಾಯತ್ ಅಭಿವೃದ್ಧಿ  ಅಧಿಕಾರಿಗಳಾದ ಗಿರೀಶ್ ನಾಯ್ಕ್ , ತಾಂತ್ರಿಕ ಸಹಾಯಕ ಇಂಜನೀಯರ್ ರಾಜೇಶ್ ಮಡಿವಾಳ, ಡಿಇಒ ಗೀತಾ ನಾಯ್ಕ, ಸಿಬ್ಬಂದಿ ಪ್ರದೀಪ್ ಶಟ್ಟಿ, ಕಮಲಾಕರ ಗುನಗಾ, ವಿನಾಯಕ ಶೆಟ್ಟಿ,  ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆ  ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು