ಉತ್ತರ ಕನ್ನಡ: ಹೊಸ ವರ್ಷಾಚರಣೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ದಾಂಡೇಲಿಯಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಯಾವುದೇ ಅನುಮತಿ ಪಡೆಯದೇ ಅಕ್ರಮ ವಾಟರ್ ಸ್ಪೋರ್ಟ್ಸ್ ಮಜಾ ನೀಡಲು ರ್ಯಾಫ್ಟಿಂಗ್ ನಡೆಯುತ್ತಿದೆ.
ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಕೆಲವು ತಂಡಗಳು ಹಾಗೂ ರೆಸಾರ್ಟ್ಗಳು ಅಕ್ರಮವಾಗಿ ವೈಟ್ ವಾಟರ್ ರ್ಯಾಫ್ಟಿಂಗ್ ನಡೆಸುತ್ತಿವೆ. ಬೆರಳೆಣಿಕೆಯ ಅನುಮತಿ ಪಡೆದವರ ನಡುವೆ ಅಕ್ರಮವಾಗಿ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಕೇವಲ ಪ್ರವಾಸಿಗರ ಜೀವದ ಜತೆ ಚೆಲ್ಲಾಟವಾಡೋದು ಮಾತ್ರವಲ್ಲದೇ, ಜಿಲ್ಲೆಗೆ ಬರುವ ಪ್ರವಾಸಿಗರಿಂದಲೂ ಭರ್ಜರಿ ಹಣ ಕೀಳಲಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಒಂದು ಸಮಿತಿಯಿದ್ದು, ಈ ಸಮಿತಿಯ ಮೂಲಕವೇ ಶುಲ್ಕ ಪಾವತಿ ಮಾಡಿದವರಿಗೆ ರ್ಯಾಫ್ಟಿಂಗ್ ನಡೆಸಲು ಅನುಮತಿ ನೀಡಲಾಗುತ್ತದೆ. ರ್ಯಾಫ್ಟಿಂಗ್ ನಡೆಸಲಿಚ್ಛಿಸುವವರು ಅಪ್ಲಿಕೇಶನ್ ಸಲ್ಲಿಸಿದ ಬಳಿಕ ಫೈನಲ್ ಮಾಡಿದ ಶುಲ್ಕ ಪಾವತಿ ಮಾಡಲು ಪತ್ರ ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಈಗಾಗಲೇ ಅಕ್ರಮ ರ್ಯಾಫ್ಟಿಂಗ್ ಸಂಬಂಧಿಸಿ ಪ್ರಕರಣವೊಂದು ದಾಖಲಾಗಿದೆ. ಅಕ್ರಮವಾಗಿ ನಡೆಸಿದ್ರೆ ಸೂಕ್ತ ಪ್ರಕರಣ ದಾಖಲಿಸಲಾಗುತ್ತದೆ. ಈಗಾಗಲೇ ಜಮಾ ಮಾಡಿದ ನಂತರವೂ ಅನುಮತಿ ದೊರಕದಂತಹ ಯಾವುದೇ ಪ್ರಕರಣಗಳಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.