ಉತ್ತರ ಕನ್ನಡ: ಹವಾಮಾನ ವೈಪರೀತ್ಯದಿಂದ 27 ಮೀನುಗಾರರಿದ್ದ ಗೋವಾ ಮೂಲದ ಬೋಟ್ ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದೆ. ನವೆಂಬರ್ 29 ರಂದು ಗೋವಾದ ಪಣಜಿಯಿಂದ ಹೊರಟಿದ್ದ ಬೋಟ್ ಅಂಕೋಲ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಕೊನೆಯ ಲೊಕೇಷನ್ ತೋರಿಸಿತ್ತು.
ಇಂಜಿನ್ನಲ್ಲಿ ಸಮಸ್ಯೆಯಾಗಿ ಸಮುದ್ರದಲ್ಲಿ ಬೋಟ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೋಟ್ ಮಾಲೀಕ ಮಾಹಿತಿ ಕೋಸ್ಟ್ಗಾರ್ಡ್ಸ್ಗೆ ಮಾಹಿತಿ ನೀಡಿದ್ದಾರೆ. ಕೋಸ್ಟ್ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಿಚಾಂಗ್ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕಳೆದ ಎರಡು ದಿನಗಳಿಂದ ತಂಪು ಗಾಳಿ ಬೀಸುತ್ತಿದೆ. ಜೊತೆಗೆ ಮೋಡ ಕವಿದ ವಾತಾವರಣೆವಿದೆ.