ಕಾರ್ಕಳ: ಮಹಿಳಾ ಸಿಬ್ಬಂದಿಯೋರ್ವರು ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 14ರಂದು ನಡೆದಿದೆ.
ನಗರದ ಮಾರ್ಕೆಟ್ ಬಳಿಯ ನಿವಾಸಿ, ವಿವಾಹಿತೆ ಪ್ರಮೀಳಾ ದೇವಾಡಿಗ (32) ಆತ್ಮಹತ್ಯೆ ಮಾಡಿಕೊಂಡವರು. ಇವರು ಕಾರ್ಕಳ ಪೇಟೆಯ ಮಾರ್ಕೆಟ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಪ್ರಮೀಳಾ ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು. ಶಂಕಿಸಲಾಗಿದೆ. ಪೊಲೀಸರು ಪರಿಶೀಲಿಸಿದರು.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು