News Karnataka Kannada
Friday, April 12 2024
Cricket
ಮೈಸೂರು

ಆಲೂರು ವೆಂಕಟರಾಯರು ಕರ್ನಾಟಕದ ಸಾಕ್ಷಿ ಪ್ರಜ್ಞೆ: ಬನ್ನೂರು ರಾಜು

Alur Venkata Rao is a witness consciousness of Karnataka: Bannur Raju
Photo Credit : By Author

ಮೈಸೂರು: ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಗ್ಗೂಡಿಸಿದ ಪ್ರಮುಖರಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಮೊದಲಿಗರಾಗಿದ್ದು ಇವತ್ತಿಗೂ ಕನ್ನಡದ ಅಸ್ಮಿತೆಯಾಗಿ ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದ್ದಾರೆಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಹಾಗೂ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಆಲೂರು ವೆಂಕಟರಾಯರ ಜನ್ಮದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬಾಲಕರಾಗಿದ್ದಾಗಲೇ ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಆಲೂರು ವೆಂಕಟರಾಯರು ಅಚ್ಚ ಕನ್ನಡ ನೆಲವಾದ ಉತ್ತರ ಕರ್ನಾಟಕದ ಭಾಗವನ್ನು ದಕ್ಷಿಣ ಮರಾಠ ದೇಶ ಎಂದು ಮರಾಠಿಗರು ಕರೆಯುತ್ತಿದ್ದ ಕಾಲಘಟ್ಟದಲ್ಲಿ ಧಾರವಾಡದಲ್ಲಿ ಮರಾಠಿ ಬಾಹುಳ್ಯದ ನಡುವೆಯೇ ಕನ್ನಡದ ಕಿಚ್ಚು ಹೊತ್ತಿಸಿ ಕನ್ನಡ ನಾಡು, ನುಡಿಯ ಬಗೆಗೆ ಕೆಚ್ಚಿನಿಂದ ಹೋರಾಟ ಆರಂಭಿಸಿದವರೆಂದರು.

ಕರ್ನಾಟಕದ ಪುರೋಭಿವೃದ್ಧಿ ಹಾಗೂ ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರೂ ಕಂಕಣ ಬದ್ಧರಾಗಬೇಕು. ಕರ್ನಾಟಕತ್ವದೊಡನೆ ಎಲ್ಲರಲ್ಲೂ ಕನ್ನಡ ಪ್ರಜ್ಞೆ ಮೂಡಿಸಿ ಕನ್ನಡದ ಅಭಿಮಾನದ ಬೀಜ ಬಿತ್ತಿ ಬೆಳೆಯುವ ಸದಾಶಯದಿಂದ ಇಡೀ ಕರ್ನಾಟಕವನ್ನು ಸುತ್ತಿ ಅಲೆದಾಡಿ ಆಲೂರರು ‘ಕರ್ನಾಟಕ ಗತವೈಭವ’ ಎಂಬ ಮಹತ್ವದ ಕೃತಿಯೊಂದನ್ನು ಬರೆದು ನಾಡಿಗೆ ನೀಡಿದ್ದಾರೆ ಎಂದರು.

ಆಲೂರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯಪತ್ರಕರ್ತ ದೊಡ್ಡನಹುಂಡಿರಾಜಣ್ಣನವರು, ಪುರೋಹಿತರೆಂದರೆ ಪುರದ ಹಿತ ಬಯಸುವವರು. ಅಂದರೆ ಒಂದು ಊರಿನ ಹಿತ ರಕ್ಷಕರು. ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಇಡೀ ನಾಡಿನ ಸಂರಕ್ಷಕರು. ಕನ್ನಡದ ಕುಲೋದ್ಧಾರಕರು. ಆದ್ದರಿಂದಲೇ ಅವರು ಕನ್ನಡ ಕುಲ ಪುರೋಹಿತರೆಂದು ಕನ್ನಡ ನಾಡಿನಾದ್ಯಂತ ಹೆಸರಾಗಿರುವುದೆಂದ ಅವರು ಮಾತೃಭಾಷಾಭಿಮಾನದ ವಿಷಯದಲ್ಲಿ ಪ್ರತಿಯೊಬ್ಬರಿಗೂ ಆಲೂರರು ಮಾದರಿ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಚ್. ಎಸ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಹಾಗೂ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಸ್ತುತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಎಸ್.ಲಕ್ಷ್ಮೀ ಹಾಗೂ ಸಿಂಧುಮೇನ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎಂ. ಮಂಗಳಗೌರಮ್ಮ ಎಲ್ಲರನ್ನೂ ಸ್ವಾಗತಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಎಸ್. ಸತೀಶ್ ವಂದನಾರ್ಪಣೆ ಮಾಡಿದರು.ಶಿಕ್ಷಕರಾದ ಎಚ್. ಪಿ. ಹರೀಶ್,  ಶ್ರೀನಿವಾಸಮೂರ್ತಿ, ಸತೀಶ್, ಚೇತನ್, ಶಿವು ಮುಂತಾದವರು ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಶಿಕ್ಷಕ ಶ್ರೀನಿವಾಸಮೂರ್ತಿಯವರು  ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು