ಉಡುಪಿ: ಕಾಣಿಯೂರು ಮಠದ ಪರಮಪೂಜ್ಯ ಶ್ರೀ ವಿದ್ಯಾವಾರಿನಿಧಿತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ರಥಬೀದಿಯ ಬಳಿಯ ಅಷ್ಟಮಠದ ಯತಿಗಳ ವೃಂದಾವನ ಸಮುಚ್ಚಯದಲ್ಲಿ ಇಂದು ವಿದ್ಯಾವಾರಿನಿಧಿತೀರ್ಥ ಶ್ರೀಪಾದರ ವೃಂದಾವನಕ್ಕೆ ಪಾದ್ಯವನ್ನಿತ್ತು ವಿಶೇಷ ಪೂಜೆ ಸಲ್ಲಿಸಲಾಯಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಶ್ರೀ ಕಾಣಿಯೂರು ಮಠಾದೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಪರಮಪೂಜ್ಯ ಶ್ರೀವಿದ್ಯಾವಾರಿನಿಧಿತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.