News Karnataka Kannada
Friday, May 03 2024
ಉಡುಪಿ

ಉಡುಪಿ: ಮಲ್ಪೆಯಲ್ಲಿ ಡಿ.25ರಿಂದ ತೇಲುವ ಸೇತುವೆ ಪುನರಾರಂಭ, ಪ್ರವಾಸಿಗರಲ್ಲಿ ಮಂದಹಾಸ

Floating bridge in Malpe to resume from December 25, smiles among tourists
Photo Credit : News Kannada

ಉಡುಪಿ: ಪ್ರವಾಸಿಗರು ಬಹಳಷ್ಟು ನಿರೀಕ್ಷೆ ಹಾಗೂ ಕುತೂಹಲದಿಂದ ಕಾಯುತ್ತಿರುವ “ತೇಲುವ ಸೇತುವೆ” ಮಲ್ಪೆ ಬೀಚ್ ನಲ್ಲಿ ಇದೇ ಬರುವ ಡಿ. 25ರಿಂದ ಮತ್ತೆ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಗೊಳ್ಳಲಿದೆ.

ಮಲ್ಪೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ತೇಲುವ ಸೇತುವೆ ಪುನರಾರಂಭಗೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆ ಡಬಲ್ ಆಗುವುದರಲ್ಲಿ ಸಂಶಯವಿಲ್ಲ. ಮಲ್ಪೆ ಕಡಲ ಕಿನಾರೆಯ ಸೌಂದರ್ಯ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಿಗರನ್ನು ಕೈಬೀಸಿಕರೆಯುತ್ತಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ತೇಲುವ ಸೇತುವೆ ಹೊಸ ಅನುಭವವನ್ನು‌ ಕಟ್ಟಿಕೊಡುವುದರಲ್ಲಿ ಎರಡು ಮಾತಿಲ್ಲ.

ಲಕ್ಷಾಂತರ ವೆಚ್ಚದಲ್ಲಿ ಮಲ್ಪೆ ಬೀಚ್ ನಲ್ಲಿ ಆರಂಭಗೊಂಡಿದ್ದ ತೇಲುವ ಸೇತುವೆ ಚಂಡ ಮಾರುತದ ಹೊಡೆತಕ್ಕೆ ಸಿಲುಕಿ ಹಾನಿಗೊಂಡಿತ್ತು. ಇದೀಗ ಪ್ರವಾಸಿಗರ ಅಪೇಕ್ಷೆಯಂತೆ ಪುನರಾರಂಭಗೊಳ್ಳುತ್ತಿದ್ದು, ಪ್ರವಾಸಿಗರಲ್ಲಿ ಮಂದಹಾಸ ಮೂಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು