ಮಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕಿನ ಮೂಲಕ ಇಂದಿನಿಂದ ಭಾರತೀಯ ಪರೋಕ್ಷ ತೆರಿಗೆ ಪಾವತಿ ವ್ಯವಸ್ಥೆಯ ಕೇಂದ್ರ ಕಚೇರಿ ರಾಷ್ಟ್ರೀಯ ಜಾಲತಾಣವಾದ (ಪೋರ್ಟಲ್) ಇಂಡಿಯನ್ ಕಸ್ಟಮ್ಸ್ ಇಲೆಕ್ಟಾನಿಕ್ ಗೇಟ್ ವೇ (ICEGATE) ಮುಖಾಂತರ ಆನ್ಲೈನ್ ನಲ್ಲಿ ಕಸ್ಟಮ್ಸ್ ತೆರಿಗೆ ಪಾವತಿಸಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ
ಮಹಾಬಲೇಶ್ವರ ಎಂ ಎಸ್ ಅವರು ಈ ಸೌಲಭ್ಯದ ಮುಖಾಂತರ ನಮ್ಮ ಬ್ಯಾಂಕಿನ ವೈಯಕ್ತಿಕ ಹಾಗೂ ವಾಣಿಜ್ಯ ಗ್ರಾಹಕರಿಗೆ
ಕಸ್ಟಮ್ಸ್ ತೆರಿಗೆಯನ್ನು ಅವರಿಗೆ ಅನುಕೂಲವಾಗುವಂತೆ ಕಸ್ಟಮ್ಸ್ ತೆರಿಗೆ ಜಾಲತಾಣದ ಮೂಲಕ ಆನ್ಲೈನ್ನಲ್ಲಿಯೇ
ಕರ್ಣಾಟಕ ಬ್ಯಾಂಕಿನ ಮೂಲಕ ಪಾವತಿ ಮಾಡಬಹುದಾಗಿದ್ದು, ಇದು ಅವರ ವ್ಯವಹಾರಗಳಿಗೆ ಪೂರಕ ವಾತಾವರಣವನ್ನು
ಒದಗಿಸಲಿದೆ. ಇದರಿಂದಾಗಿ ಬ್ಯಾಂಕಿನ ವಿದೇಶೀ ವ್ಯವಹಾರಗಳ ಮೇಲೆ ಧನಾತ್ಮಕ ಪರಿಣಾಮ ಉಂಟಾಗಲಿದ್ದು, ಬ್ಯಾಂಕಿನ
ಕಾಸಾ (CASA)) ಠೇವಣಿಗಳು ಇನ್ನಷ್ಟು ವೃದ್ಧಿಯಾಗಲಿವೆ ಎನ್ನುವ ವಿಶ್ವಾಸವಿದೆ. ಬ್ಯಾಂಕಿನ ಡಿಜಿಟಲ್ ಪರಿವರ್ತನಾ
ಪ್ರಕ್ರಿಯೆಯಾದ ‘ಕೆಬಿಎಲ್ ನೆಕ್ಸ್’ ಮೂಲಕ ನಮ್ಮ ಗ್ರಾಹಕರಿಗೆ ದೊರೆತ ಅನೇಕ ಡಿಜಿಟಲ್ ಸೌಲಭ್ಯಗಳಲ್ಲಿ ICEGATE ಮೂಲಕ ಕಸ್ಟಮ್ಸ್ ತೆರಿಗೆ ಪಾವತಿ ವಿಧಾನವೂ ಒಂದಾಗಿದೆ ಬ್ಯಾಂಕಿನ ಗ್ರಾಹಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸುತ್ತಿದ್ದೇನೆ ಎಂದು ನುಡಿದರು.