News Karnataka Kannada
Friday, May 03 2024
ಉಡುಪಿ

ಉಡುಪಿ: ಆನ್ ಲೈನ್‌ನಲ್ಲಿ ಹಣ ಕಳೆದುಕೊಂಡ 24 ತಾಸಿನೊಳಗೆ ಸೈಬರ್ ಪೊಲೀಸರಿಗೆ ದೂರು‌ ನೀಡಿ

File a complaint with the cyber police within 24 hours of losing money online
Photo Credit : News Kannada

ಉಡುಪಿ: ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಆನ್ ಲೈನ್ ವಂಚನೆ ಹೆಚ್ಚಾಗಿದ್ದು, ಇದಕ್ಕೆ ಬ್ರೇಕ್ ಹಾಕುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಆನ್ ಲೈನ್ ವಂಚಕರು ಎಲ್ಲೋ ಕುಳಿತು ಕ್ಷಣಾರ್ಧದಲ್ಲಿ ಹಣ ಡ್ರಾ ಮಾಡಿ ವಂಚಿಸುತ್ತಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು, ಆನ್ ಲೈನ್‌ ನಲ್ಲಿ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಂತಹ ಸಂದರ್ಭದಲ್ಲಿ 24 ತಾಸಿನೊಳಗೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡಬೇಕು. ಅಥವಾ ಹೆಲ್ಪ್ ಲೈನ್ ನಂಬರ್ 1930 ಗೆ ಕರೆ ಮಾಡಿ ತಿಳಿಸಬೇಕು.

ಘಟನೆ ನಡೆದ 24ಗಂಟೆಗಳ ಅವಧಿಯನ್ನು ಗೋಲ್ಡನ್ ಅವರ್ ಅಂತ ಕರೆಯುತ್ತೇವೆ. ರೀತಿ‌ ಮಾಹಿತಿ ನೀಡಿದಾಗ ನಿಮ್ಮ ಅಕೌಂಟ್ ಬ್ಲಾಕ್ ಮಾಡುವ ಮೂಲಕ ಹೆಚ್ಚಿನ ಹಣ ಕಳೆದುಕೊಳ್ಳುವುದು ತಪ್ಪುತ್ತದೆ. ಇನ್ನು ಸೈಬರ್ ಮೋಸಗಳಲ್ಲಿ ಹಣ ಕಳೆದುಕೊಂಡವರು ತಮ್ಮ ಮಾಹಿತಿಯನ್ನು ಅಪರಿಚಿತರೊಡನೆ ಹಂಚಿಕೊಂಡಿರುತ್ತಾರೆ. ಈ ರೀತಿ ನಿಮ್ಮ ಯಾವುದೇ ಡಿಟೇಲ್ಸ್ ನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು