News Karnataka Kannada
Monday, May 06 2024
ಉಡುಪಿ

ಮಣಿಪಾಲದಲ್ಲಿ ನಾಳೆಯಿಂದ ಎರಡು ದಿನಗಳ ವಿಬಿನ್‌ ಫೆಸ್ಟ್‌ ಯುವಉತ್ಸವ

Tribe Vibe’s Vibin’ Fest 2023 to arrive in Manipal on March 11th
Photo Credit : News Kannada

ಮಣಿಪಾಲ: ಇಲ್ಲಿಯ ಕ್ರಿಸ್ಟಿಯನ್‌ ಹೈಸ್ಕೂಲ್‌ ಮತ್ತು ಪ್ರೈಮರಿ ಸ್ಕೂಲ್‌ ಆವರಣದಲ್ಲಿ ಎರಡು ದಿನಗಳ “ಟ್ರೈಬ್‌ವೈಬ್‌ ವಿಬಿನ್‌ ಫೆಸ್ಟ್‌” ಸಾಂಸ್ಕೃತಿಕ ಉತ್ಸವ ಮಾರ್ಚ್‌ 11ರಿಂದ ಆರಂಭವಾಗಲಿದೆ.

ಯುವ ಉತ್ಸಾಹಿಗಳನ್ನು ಗುರಿಯಾಗಿಟ್ಟುಕೊಂಡಿರುವ 2023ರ ವಿಬಿನ್‌ ಫೆಸ್ಟ್‌ ಉತ್ಸವವನ್ನು ಜೈಪುರದ ಬಳಿಕ ಮಣಿಪಾಲದಲ್ಲಿ ಆಯೋಜಿಸಲಾಗಿದೆ. ದೇಶದ ಪ್ರಖ್ಯಾತ ಕಲಾವಿದರು ಮನಸೂರೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ವಿಬಿನ್‌ ಫೆಸ್ಟ್‌ನ ಮೊದಲ ದಿನ ಖ್ಯಾತ ಗಾಯಕ ಪ್ರತೀಕ್‌ ಅವರ ಹಾಡುಗಳು, ಸ್ಟಾಂಡ್‌ಅಪ್‌ ಕಾಮಿಡಿಯನ್‌ ಝಾಕೀರ್‌ ಖಾನ್‌ ಪ್ರೇಕ್ಷಕರನ್ನು ನಗೆಗಡಲ್ಲಿ ಮುಳುಗಿಸಿದರೆ, ಆನಂದ್‌ ಭಾಸ್ಕರ್‌ ಕಲೆಕ್ಟಿವ್‌ ಗ್ರೂಪ್‌, ಸಲ್ಮಾನ್‌ ಇಲಾಹಿ ಮತ್ತು ಝಿಫೈರ್‌ಟೋನ್‌ ಗ್ರೂಪ್‌ ಕಾರ್ಯಕ್ರಮ ನೀಡಲಿದೆ.

ಎರಡನೇ ದಿನ ಆದಿತ್ಯ ಕುಲಕ್ಷೇತ್ರ ಅವರ ಸಂಗೀತವಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಕುಲ್ಲು” ಎಂದೇ ಹೆಸರಾದವರ ನಗೆ ರೂಪಕವಿದೆ. ನಾನ್‌ ವಯಲನಿಸ್ಟ್‌ ಪ್ರಾಜೆಕ್ಟ್‌ ತಂಡದ ಸಂಗೀತ ಮತ್ತು ಡಿಜೆ ಪ್ಯಾರಾನಾಕ್ಸ್‌ ಅವರ ಡಿಜೆ ಹುಚ್ಚೆಬ್ಬಿಸಲಿದೆ.

ಸಂಗೀತ ಕ್ಷೇತ್ರದ ತಂತ್ರಜ್ಞಾನ ಬೆಳವಣಿಗೆಯನ್ನು ಪರಿಚಯಿಸುವ “ಈಸ್ಪೋರ್ಟ್ಸ್‌ ಅರೇನಾ” ಅತ್ಯಾಧುನಿಕ ಟೆಕ್‌ ಝೋನ್‌ ಕಾರ್ಯಕ್ರಮದ ಸ್ಥಳದಲ್ಲಿ ರೂಪಿಸಲಾಗಿದೆ. ಪ್ರೇಕ್ಷಕರು ಇಲ್ಲಿ ಅತ್ಯಾಧುನಿಕ ಮ್ಯೂಸಿಕ್‌ ಉಪಕರಣಗಳು, ವರ್ಚುವಲ್‌ ರಿಯಾಲ್ಟಿ ಸೆಟ್‌ಅಪ್‌ ಮತ್ತು ಕಾರ್‌ ಸಿಮ್ಯುಲೇಟರ್‌ಗಳ ಅನುಭವ ಪಡೆಯಬಹುದು.

ಸೃಜನಶೀಲತೆಗೂ ವಿಬಿನ್‌ ಫೆಸ್ಟ್‌ ಅವಕಾಶ ನೀಡುತ್ತಿದ್ದು ವಿಶೇಷವಾದ ಕಲಾ ಪ್ರದರ್ಶನ ಆಯೋಜಿಸಲಾಗಿದೆ. ಫ್ಯಾಷನ್‌ ಶೋ ಸಹ ನಡೆಯಲಿದೆ. ಫೆಸ್ಟ್‌ ಆವರಣದಲ್ಲಿ ಬೃಹತ್‌ ಆಹಾರ ಮೇಳವನ್ನೂ ಸಂಯೋಜಿಸಲಾಗಿದ್ದು, 25 ಮಳಿಗೆಗಳಿರಲಿವೆ.

ವಿಬಿನ್‌ ಫೆಸ್ಟ್‌ ಕುರಿತು ಮಾತನಾಡಿದ ಟ್ರೈಬ್‌ವೈಬ್‌ ಸ್ಥಾಪಕ ಮತ್ತು ಸಿಇಒ ಶೋವನ್‌ ಶಾ ಅವರು “ವಿಬಿನ್‌ ಫೆಸ್ಟ್‌ಗೆ ಜೈಪುರದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮಣಿಪಾಲ ಮತ್ತು ಸುತ್ತಮುತ್ತ ಯುವಜನರೂ ಇದನ್ನು ಆನಂದಿಸಲಿದ್ದಾರೆ. ಪ್ರಖ್ಯಾತ ಕಲಾವಿದರು ಮತ್ತು ಕಲಾತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೊಂದು ಸ್ಮರಣೀಯ ಕಾರ್ಯಕ್ರಮವಾಗಲಿದೆ. ಮುಂದಿನ ವಿಬಿನ್‌ ಫೆಸ್ಟ್‌ ಅಹ್ಮದಾಬಾದ್‌, ಕೋಟಾ, ಇಂದೋರ್‌ ಮತ್ತು ದೆಹಲಿಯಲ್ಲಿ ಆಯೋಜಿಸಲಾಗುತ್ತಿದೆ” ಎಂದರು ತಿಳಿಸಿದರು.

ವಿವರಗಳಿಗೆ; https://vibinfestival.com/

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು