ಉಡುಪಿ: ಪ್ರಖ್ಯಾತ ಜವಳಿ ಉದ್ಯಮಗಳಲ್ಲಿ ಒಂದಾಗಿರುವ ಉದ್ಯಾವರದ ಜಯಲಕ್ಷ್ಮಿ ಸಿಲ್ಕ್ಸ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಕಟ್ಟಡದ ಹಿಂದಿನ ಭಾಗದಲ್ಲಿರುವ ಶೌಚಾಲಯದ ಕಿಟಕಿ ಒಡೆದು ಒಳನುಗ್ಗಿದ ಕಳ್ಳರು, ಇಡೀ ದಿನದ ವ್ಯಾಪರದ ಹಣವನ್ನು ಕದ್ದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಮುಂಜಾನೆ ಅಂಗಡಿ ತೆರೆದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ವಾನ ದಳದೊಂದಿಗೆ ಪೊಲೀಸರ ತಂಡ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದೆ.
ಕಳ್ಳತನ ನಡೆದಿರುವ ಒಟ್ಟು ಮೌಲ್ಯ ಎಷ್ಟು ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಾಗಿದ್ದು,ಉನ್ನತ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.