News Karnataka Kannada
Sunday, May 05 2024
ಉಡುಪಿ

ಅಯೋಧ್ಯೆ ಬಾಲರಾಮನಿಗೆ ಕೋಟ ಶ್ರೀಕಾಶಿಮಠದಿಂದ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ

ಕೋಟದ ಶ್ರೀಕಾಶಿಮಠ ಸಂಸ್ಥಾನವು ಸುಮಾರು ಒಂದು ಕೆಜಿ ಚಿನ್ನ ಮತ್ತು 3ಕೆಜಿ ಬೆಳ್ಳಿಯನ್ನು ಒಳಗೊಂಡಿರುವ 70 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪೀಠ ಪ್ರಭಾವಳಿಯನ್ನು ಬಾಲರಾಮನ ಉತ್ಸವಮೂರ್ತಿಗಾಗಿ ಸಿದ್ಧಪಡಿಸಿದೆ.
Photo Credit : News Kannada

ಉಡುಪಿ: ಕೋಟದ ಶ್ರೀಕಾಶಿಮಠ ಸಂಸ್ಥಾನವು ಸುಮಾರು ಒಂದು ಕೆಜಿ ಚಿನ್ನ ಮತ್ತು 3ಕೆಜಿ ಬೆಳ್ಳಿಯನ್ನು ಒಳಗೊಂಡಿರುವ 70 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪೀಠ ಪ್ರಭಾವಳಿಯನ್ನು ಬಾಲರಾಮನ ಉತ್ಸವಮೂರ್ತಿಗಾಗಿ ಸಿದ್ಧಪಡಿಸಿದೆ.

ಈ ಹಿನ್ನೆಲೆಯಲ್ಲಿ ಕೋಟದ ಶ್ರೀಕಾಶಿಮಠದ ಶಾಖೆಯಲ್ಲಿ ಚಿನ್ನದ ಪ್ರಭಾವಳಿಯನ್ನು ಅದ್ದೂರಿ ಮೆರವಣಿಗೆ ಮಾಡಿ ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.

ಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಕಾಲದ ಮಂಡಲೋತ್ಸವದಲ್ಲಿ ಈ ಸುವರ್ಣ ಪ್ರಭಾವಳಿಯನ್ನು ಬಾಲರಾಮನ ಉತ್ಸವ ಮೂರ್ತಿಗೆ ತೋಡಿಸಲಾಯಿತು. ಈಗಾಗಲೇ ಕೋಟದ ಶ್ರೀಕಾಶಿಮಠ ಸಂಸ್ಥಾನವು ಅಯೋಧ್ಯೆಯ ಬಾಲರಾಮನಿಗೆ ಬೆಳ್ಳಿಯ ಪಲ್ಲಕ್ಕಿ ಸಮರ್ಪಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು