News Karnataka Kannada
Saturday, May 04 2024
ಉಡುಪಿ

ಉಡುಪಿ: ಶಾರ್ಟ್ ಫಿನ್ಡ್ ಪೈಲೆಟ್ ವೇಲ್ ಮೀನಿನ ಶವ ಪತ್ತೆ

Fish
Photo Credit : News Kannada

ಕುಂದಾಪುರ: ಅಳಿವಿನಂಚಿನಲ್ಲಿರುವ ಅಪರೂಪದ ಪ್ರಭೇದಗಳೊಂದಾದ ಡಾಲ್ಫಿನ್ ನಂತೆ ಭಾಸವಾಗುವ ತಿಮಿಂಗಿಲದ ಮೇಲ್ಮೆಯನ್ನು ಹೊಂದಿರುವ ಸುಮಾರು ೩೦೦ ಕೆಜಿ ಯಷ್ಟು ತೂಗಬಲ್ಲ ಶಾರ್ಟ್ ಫಿನ್ಡ್ ಪೈಲೆಟ್ ವೇಲ್ (ಗ್ಲೋಬಿಸೆಫಾಲಾ ಮ್ಯಾಕ್ರೋರಿಂಚಸ್) ಮೀನಿನ ಕಳೆಬರಹ ಕುಂದಾಪುರ ತಾಲೂಕಿನ ತ್ರಾಸಿ ಕಡಲ ತೀರದ ಬೀಚ್ ಬಳಿ ಪತ್ತೆ ಆದ ಘಟನೆ ನಡೆದಿದೆ.

ತ್ರಾಸಿ ಕಡಲ ತೀರದಲ್ಲಿ ವಾಯು ವಿಹಾರ ನಡೆಸುತ್ತಿರುವ ಸಂದರ್ಭದಲ್ಲಿ ಬೀಚ್ ಬಳಿ ಸತ್ತು ಕೊಳೆತು ದುರ್ನಾತ ಬಿರುತ್ತಿದ್ದ ಬೃಹತ್ ಮೀನನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.ಅರಣ್ಯಾಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಮೀನಿನ ಶವವನ್ನು ಮಹಜರು ನಡೆಸಿ ನಂತರ ತ್ರಾಸಿ ಬೀಚ್ ಬಾಯ್ಸ್ ತಂಡದವರ ಸಹಕಾರದಿಂದ ಹೂಳಲಾಯಿತು.

ಬೃಹತ್ ಗಾತ್ರದ ಶಾರ್ಟ್ ಫಿನ್ಡ್ ಪೈಲೆಟ್ ವೇಲ್ ಮೀನು ಕೊಳೆತು ಹೋಗಿದ್ದರಿಂದ ಶವ ಪರೀಕ್ಷೆ ಸಂದರ್ಭದಲ್ಲಿ ಮೀನಿನ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.

ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ದಿಲೀಪ್,ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳಾದ ತೇಜಸ್ವಿನಿ ಶೆಟ್ಟಿಗಾರ್, ವೀರಿಲ್, ಗಂಗೊಳ್ಳಿ ಠಾಣೆ ಪಿಎಸ್‌ಐ ಜಯಶ್ರೀ ಹೊನ್ನುರ (ತನಿಖೆ),ತ್ರಾಸಿ ಬೀಚ್ ಬಾಯ್ಸ್ ಸದಸ್ಯರು ಉಪಸ್ಥಿತರಿದ್ದರು.

ಅಪರೂಪದ ಪ್ರಬೇಧ:ಗ್ಲೋಬಿಸೆಫಾಲಾ ಕುಲದ ಎರಡು ಜಾತಿಯ ಸೆಟಾಸಿಯನ್‌ಗಳಲ್ಲಿ ಒಂದಾಗಿದೆ ಶಾರ್ಟ್ ಫಿನ್ಡ್ ಪೈಲೆಟ್ ವೇಲ್ ಮೀನು ಆಳ ಸಮುದ್ರದಲ್ಲಿ ಜೀವಿಸುತ್ತದೆ, ಕಡಲಾಳದಲ್ಲಿ ಗಾಯಗೊಂಡು ಸತ್ತ ಸಂದರ್ಭದಲ್ಲಿ ಕಡಲ ತೀರಕ್ಕೆ ಬಂದು ಬೀಳುತ್ತವೆ ಕರ್ನಾಟಕ ಕರಾವಳಿ ಸಮುದ್ರದಲ್ಲಿ ಬಹಳ ಅಪರೂಪವಾಗಿ ಕಂಡು ಬರುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು