News Karnataka Kannada
Sunday, April 28 2024
ಉಡುಪಿ

ಕಾರ್ಕಳ: ಕಾಂಗ್ರೆಸ್ ರಾಷ್ಟ್ರಭಕ್ತ ಪಕ್ಷವಾಗಿದೆ- ಬಿಕೆ ಹರಿಪ್ರಸಾದ್

Karkala: Congress is a patriotic party- BK Hariprasad
Photo Credit : News Kannada

ಕಾರ್ಕಳ: ಇಂಡಿಯನ್ ನೇಶನಲ್ ಕಾಂಗ್ರೆಸ್ ರಾಷ್ಟ್ರಭಕ್ತ ಪಕ್ಷವಾಗಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಮಾನತೆಯ ಜೊತೆಗೆ ಮೂಲಸೌಕರ್ಯದ ಬದ್ಧತೆಯೊಂದಿಗೆ ಸಹೋದರತ್ವವನ್ನು ಕಲಿಸಿಕೊಟ್ಟ ಪಕ್ಷ . ಆ ಮೂಲಕ ವಿಶ್ವದಲ್ಲಿ ನಮ್ಮ ದೇಶ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದರು.

ಮಂಜುನಾಥ್ ಪೈ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದ ಅದರಲ್ಲೂ ಅವಿಭಜಿತ ದಕ್ಷಿಣ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿದ್ದ ವಿಜಯಬ್ಯಾಂಕ್, ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್ ಗಳು ಹೇಳ ಹೆಸರಿಲ್ಲದಂತೆ ಮಾಡಿದ ಕೀರ್ತಿ ಇದ್ದರೆ ಅದು ಬಿಜೆಪಿಗೆ ಸಲ್ಲುತ್ತದೆ. ಆ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕದ ಮೇಲೆ ಗದಾಪ್ರಹಾರ ನಡೆಸಿದೆ. ಅದರ ಫಲವಾಗಿ ಕರ್ನಾಟಕದ ಅಮೃತವಾದ ನಂದಿನಿ ಹಾಲು ತಯಾರಕ ಘಟಕದ ಮೇಲೆ ವಿಷ ಚೆಲ್ಲುವ ಕಾಯಕ ಮುಂದುವರಿಸಿದೆ. ಇಷ್ಟೆಲ್ಲ ಬೆಳವಣಿಗೆ ನಡೆದದರೂ, ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸರಕಾರ ಮೌನವಾಗಿ‌ ಇರಲು ಕಾರಣವೆಂಬುವುದನ್ನು ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದರು.

ಕೊಡಗು ಭೂ ಕುಸಿತ , ಪ್ರವಾಹ , ಕೋವಿಡ್ ಸಮಯದಲ್ಲಿ ಮೃತಪಟ್ಟವರನ್ನು ಒಮ್ಮೆಯು ಪ್ರಧಾನಿ ನೆನಪಿಸಲಿಲ್ಲ, ಪರಿಹಾರನೀಡಲಿಲ್ಲ , ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ ಯನ್ನು ಪ್ರಶ್ನಿಸಿದರು.

ದ್ವೇಷ ಅಸೂಯೆ ಸೃಷ್ಟಿಸುವುದೇ ಬಿಜೆಪಿ ಕೆಲಸ ,ಗಾಂಧೀಜಿಯನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥುರಾಂ ಗೋಡ್ಸೆ . ಅತನನ್ನು ಪೂಜಿಸುವವರು ಬಿಜೆಪಿಯವರಾಗಿದ್ದು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬೆಂಬಲಿಸಬೇಡಿ ಎಂದು ಮತದಾರರಿಗೆ ಕರೆ ನೀಡಿದರು.

ಮುಖ್ಯ ಮಂತ್ರಿ ಸೀಟ್ 2500 ಕೋಟಿ , ಮಂತ್ರಿಯಾಗಬೇಕಾದರೆ 100 ಕೋಟಿ ನೀಡಬೇಕೆಂದು ಬಿಜೆಪಿ ಪಕ್ಷದ ಬಸರಾಜ್ ಪಾಟೀಲ್ ಯತ್ನಾಳ್ ಆರೋಪವೇ ಸಾಕ್ಷಿ ಎಂದರು.

ಜಿಲ್ಲಾ ಉಸ್ತುವಾರಿ ರೋಜಿ ಜಾನ್ ಮಾತನಾಡಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರತಿಯೊಂದು ಟೆಂಡರ್ ನಲ್ಲಿ ಶೇ. 40 ಕಮಿಷನ್ ನೀಡಬೇಕು. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಬಡವರ ಮನೆಯ ಪ್ರಾಣವನ್ನು ಹಿಂಡಿದೆ. ಅದರ ಪ್ರಯೋಗ ಮುಂದುವರಿಸಲು‌ ತಯಾರಿ ನಡೆಸುತ್ತಿದೆ ಎಂದು ಆರೋಪಿಸಿದರು.

ದಕ್ಣಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಇತಿಹಾಸ ವಿದೆ. ಎಲ್ಲ ಧರ್ಮವನ್ನು ಗೌರವಿಸುವ ಪಕ್ಷವಾಗಿದೆ ಎಂದು ಹೇಳಿದರು.

ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಸುನೀಲ್ ಕುಮಾರ್ ಹಾಗೂ ನಳಿನ್ ಕುಮಾರ್ ಬಿತ್ತಿದ ಮತೀಯ ಭಾವನೆಗಳನ್ನು ಕೆರಳಿಸಿದ ಪರಿಣಾಮವೇ ಪ್ರವೀಣ್ ಕುಮಾರ್ ಹತ್ಯೆಯಾಗಿದೆ. ಸುನೀಲ್ ಕುಮಾರ್ ಅವರ ಬೇನಾಮಿ ಹಗರಣಗಳ ಬಗ್ಗೆ ಸಂಘ ಪರಿವಾರದ ಮುಖಂಡ ಪ್ರಮೋದ್ ಮುತಾಲಿಕ್ ಸತ್ಯ‌ ಅನಾವರಣಗೊಳಿಸಿದ್ದಾರೆ. ಅದೇನಿದ್ದರೂ ಗುರು ಶಿಷ್ಯರ ನಡುವಿನ ಕಾಳಗ ಎಂದರು.

ಎಂ ಎಲ್ ಸಿ ಮಂಜುನಾಥ್ ಭಂಡಾರಿ ಮಾತನಾಡಿ, ರಾಷ್ಟ್ರ ಭಕ್ತ ಗಾಂಧಿ ಜಿ ಕೊಂದವರನ್ನು, ಧರ್ಮ ಧರ್ಮದ ನಡುವಿನ ಕಿಚ್ಚು ಹಚ್ಚುವವರನ್ನು ,ಬೆಲೆ ಏರಿಕೆ ಮಾಡಿದ ಬಿಜೆಪಿ ಯನ್ನು ಬೆಂಬಲಿಸಬೇಡಿ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಸ್ತಾವಿತ ಮಾತನಾಡಿ ಸರಕಾರದ ಸಿಮೆಂಟ್ ಹಗರಣ , ಆಹಾರ ಕಿಟ್ ಹಗರಣವನ್ನು ವನ್ನು ಹೊರಗೆಡವುಬೇಕು ಎಂದರು. ಭ್ರಷ್ಟಾಚಾರ ಮುಕ್ತ ಹಾಗೂ ಸೌಹಾರ್ದ ಸಮಾಜಕ್ಕಾಗಿ ಉದಯ್ ಕುಮಾರ್ ಶೆಟ್ಟಿ ಯವರನ್ನು ಬೆಂಬಲಿಸಿ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಲು ಶ್ರಮಿಸಿ , ಕಾರ್ಕಳ ಆದರ್ಶ ಕಾರ್ಕಳ ವಾಗಿ ಬದಲಾಯಿಸುವುದೆ ನಮ್ಮ ಗುರಿ ಎಂದರು.

ಸಭೆಯಲ್ಲಿ ಪ್ರಭಾಕರ್ ಬಂಗೇರ , ನೀರೆ ಕೃಷ್ಣ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ , ಪ್ರಭಾಕರ್ ಬಂಗೇರ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ,ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರ್ , ಮಮತಾಗಟ್ಟಿ , ಜಿಲ್ಲಾ ಪ್ರಚಾರ ಸಮಿತಿ ಹರಿಶ್ ಕಿಣಿ ,ಚಂದ್ರಶೇಖರ ಬಾಯಿರಿ , ಮೊಯಿದಿನಬ್ಬ, ದಿವಾಕರ್, ಸುಪ್ರಿತ್ ಶೆಟ್ಟಿ,ನವಿನ್ ಅಡ್ಯಂತಾಯ , ಹೆಬ್ರಿ ಪ್ರವೀಣ್ ಬಲ್ಲಾಳ್ , ಜಾರ್ಜ್ ಕಾಸ್ಟಲಿನೊ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಜನಿ ಹೆಬ್ಬಾರ್, ಅನಿತಾಡಿಸೋಜ, ದೀಪಕ್ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಆನಂದ ಪೂಜಾರಿ, ಚಂದ್ರಹಾಸ ಸುವರ್ಣ, ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜಿಲ್ಲಾ ಮಾಧ್ಯಮ ವಕ್ತಾರ ಬಿಪಿನ್ ಚಂದ್ರ , ಕಾರ್ಯಕ್ರಮ ನಿರೂಪಿಸಿದರು. ರಮ್ಯ ಸುಧೀಂದ್ರ ಹಾಗೂ ಶಿವಕುಮಾರ್ ಬಳಗದಿಂದ ದೇಶಭಕ್ತಿ ಗೀತೆಗಳನ್ನೂ ಹಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು