News Karnataka Kannada
Monday, May 06 2024
ಉಡುಪಿ

ಕಾರ್ಕಳ : ಬಜಗೋಳಿ ಜೈನ್ ಮಿಲನ್, ಯುವ ಜೈನ್ ಮಿಲನ್‌ ಪದಾಧಿಕಾರಿಗಳ ಪದಗ್ರಹಣ

Karkala: Bajagoli Jain Milan takes oath
Photo Credit : News Kannada

ಕಾರ್ಕಳ: ಮುಡಾರು, ನಲ್ಲೂರು ಮತ್ತು ಮಾಳ ಗ್ರಾಮಗಳನ್ನೊಳಗೊಂಡಿರುವ ಬಜಗೋಳಿ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಜಗೋಳಿ ಅಪ್ಪಾಯಿ ಬಸದಿಯ ಪ್ರಾಂಗಣದಲ್ಲಿ  ನಡೆಯಿತು.

ಭಾರತೀಯ ಜೈನ್ ಮಿಲನ್ ಮಂಗಳೂರು ವಲಯದ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾರ್ಗದರ್ಶನ ನೀಡಿದರು.

ವಲಯದ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್ ಯುವ ಜೈನ್ ಮಿಲನ್ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಜೈನ್ ಮಿಲನ್‌ನೊಂದಿಗಿನ ತನ್ನ ಅನುಭವಗಳನ್ನು ಹಂಚಿಕೊಂಡರು.

ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ವೀರ್ ಮುನಿರಾಜ ರೆಂಜಾಳ ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿ, ಬಜಗೋಳಿ ಜೈನ್ ಮಿಲನ್ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ವಿಶಿಷ್ಟ ಚಟುವಟಿಕೆಗಳನ್ನು ನೆನಪಿಸಿಕೊಂಡು, ಮಹಿಳೆಯರನ್ನೇ ಒಳಗೊಂಡಿರುವ ಎರಡೂ ನೂತನ ತಂಡಗಳಿಗೆ ಮಾರ್ಗದರ್ಶನದ ಸಲಹೆಗಳನ್ನು ನೀಡಿ, ಯಶಸ್ವಿ ಕಾರ್ಯನಿರ್ವಹಣೆಗಾಗಿ ಶುಭ ಹಾರೈಸಿದರು.

ನಿಕಟಪೂರ್ವ ವಲಯ ನಿರ್ದೇಶಕ ವೀರ್ ಅಂಡಾರು ಮಹಾವೀರ ಹೆಗ್ಡೆ ಹಾಗೂ ವಲಯ ನಿರ್ದೇಶಕ ವೀರ್ ಶ್ರೀವರ್ಮ ಅಜ್ರಿ ಉಪಸ್ಥಿತರಿದ್ದರು. ಅಧಕ್ಷ ವೀರ್ ಭರತ್‌ರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವ ಜೈನ್ ಮಿಲನ್ ಕಾರ್ಯದರ್ಶಿ ಸುರೇಶ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಜಗೋಳಿಯ ಅನಂತಶ್ರೀ ಜಿನಭಜನಾ ತಂಡವು ವಲಯ ಮಟ್ಟದ ಜಿನಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಪಡೆದ ನಗದು ಪುರಸ್ಕಾರವನ್ನು ಸ್ಪರ್ಧಿಗಳು ಅಪ್ಪಾಯಿ ಬಸದಿಯ ನವೀಕರಣ ಯೋಜನೆಗಾಗಿ ಸಮಿತಿಯ ಕೋಶಾದಿಕಾರಿ ಮವೀರ್ ವರ್ಧಮಾನ್ ಜೈನ್ ರಿಗೆ ಸಲ್ಲಿಸಿದರು.

ಬಜಗೋಳಿ ಜೈನ್ ಮಿಲನ್‌ನ ೨೦೨೩-೨೫ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶಕುಂತಲಾವರ್ಮ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ, ಕಾರ್ಯದರ್ಶಿಯಾಗಿ ಗೀತಾ ಉದಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ಶೃತಿ ದೀಪಕ್ ಜೈನ್ ಮತ್ತು ಜ್ವಾಲಾ ಶುಭಂಕರ ಇಂದ್ರ, ಕೋಶಾಧಿಕಾರಿಯಾಗಿ ಪವನಶ್ರೀಸುಮಿತ್ ಜೈನ್ , ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ‍್ಯದರ್ಶಿಗಳಾಗಿ ವನಿತಾ ಧನಕೀರ್ತಿ ಚೌಟ, ವಿನಯ ಸಂಜಯ್ ಜೈನ್, ರೂಪ ಜಿನೇಶ್ ಜೈನ್, ಸುಪ್ರೀತ ಬಾಹುಬಲಿ ಜೈನ್, ಸುಷ್ಮಾ ಪೃಥ್ವಿರಾಜ್ ಜೈನ್, ವೀಣಾ ಪಾರ್ಶ್ವನಾಥಜೈನ್, ರೋಹಿನಿ ರಂಜನ್ ಜೈನ್, ಹಾಗೂ ಪ್ರಣಮ್ಯ ವೃಷಭನಾಥ್ ಪ್ರಮಾಣವಚನ ಸ್ವೀಕರಿಸಿದರು.

ಯುವ ಜೈನ್ ಮಿಲನ್ ಅಧ್ಯಕ್ಷರಾಗಿ ನಿತೀಕ್ಷಾ ಪ್ರಧಾನ್ ಜೈನ್, ಉಪಾಧ್ಯಕ್ಷರಾಗಿ ಅರ್ಪಿತಾ ಜೈನ್,  ಕಾರ‍್ಯದರ್ಶಿಯಾಗಿ ಸಂಜನಾ ಜೈನ್ , ಜೊತೆ ಕಾರ‍್ಯದರ್ಶಿಯಾಗಿ ಕಾವ್ಯ ಪ್ರಮೋದ್ ಜೈನ್ , ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ‍್ಯದರ್ಶಿಗಳಾಗಿ ಪ್ರಣಮ್ಯ ಜೈನ್, ನಿಶಾ ಪವನ್ ಜೈನ್, ವೃದ್ಧಿ ಜೈನ್ ಅನನ್ಯ ಜೈನ್ ಹಾಗೂ ನಿರ್ಮಿತಾ ಪವನ್ ಜೈನ್ ಪ್ರತಿಜ್ಞೆ ಸ್ವೀಕರಿಸಿದರು.

ವೀರಾಂಗನಾ ಶರ್ಮಿಳಾ ನಿರಂಜನ್ ಸ್ವಾಗತಿಸಿದರು. ವೀರ್ ವಿರಾಜ್ ಮೇ ತಿಂಗಳ ಮಾಸಿಕ ವರದಿ ವಾಚಿಸಿದರು. ವೀರಾಂಗನಾ ಶರ್ಮಿಳಾ ಶ್ರೀವರ್ಮ ವಂದನಾರ್ಪಣೆ ಗೈದರು. ವೀರ್ ಶ್ರೇಯಾನ್ ಜೈನ್  ಕಾರ‍್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು