ಕೋಟ : ಮಂದಾರ್ತಿ ಸಮೀಪ ನಂಚಾರಿನಲ್ಲಿ ರವಿವಾರ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧುವನ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಜಿಬಿನ್ ಸಾಮ್ (20) ಮೃತ ವಿದ್ಯಾರ್ಥಿ. ಈತ ಕೇರಳ ಮೂಲದವನಾಗಿದ್ದು ಎರಡನೇ ವರ್ಷದ ನರ್ಸಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
26 ರಂದು ಅಮುಲ್ ಬಿಜಿ ಎಂಬವರ ಮನೆಗೆ ಜಿಬಿನ್ ಸಾಮ್ ಸೇರಿ ಮೂವರು ಸ್ನೇಹಿತರು ಬಂದಿದ್ದರು. ಸ್ನೇಹಿತರ ಜೊತೆಯಲ್ಲಿ ನಂಚಾರು ಸಮೀಪದ ಸೀತಾ ನದಿಗೆ ಈಜಲು ತೆರಳಿದ್ದರು ಈ ವೇಳೆ ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ಸ್ಥಳೀಯರು ಕೂಡಲೇ ಮೇಲಕ್ಕೆತ್ತಿ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದ.