ಲಂಡನ್: ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 4ನೇ ದಿನದಾಟ ಆರಂಭಗೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಗಳಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ಭಾರತದ ಬೌಲರ್ಗಳ ದಾಳಿಗೆ ತುತ್ತಾದರೂ, 370ಕ್ಕೂ ಅಧಿಕ ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಮುಖ ಬ್ಯಾಟರ್ಗಳ ವಿಕೆಟ್ ಪಡೆದ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. 65 ಟೆಸ್ಟ್ ಪಂದ್ಯವನ್ನಾಡಿರುವ ಜಡೇಜಾ 24.25 ಸರಾಸರಿ ಹಾಗೂ 2.44ರ ಎಕಾನಮಿ ರೇಟ್ನಲ್ಲಿ 268 ವಿಕೆಟ್ ಪಡೆಯುವ ಮೂಲಕ ಬಿಶನ್ ಸಿಂಗ್ ಬೇಡಿ ಅವರ ದಾಖಲೆಯನ್ನ ಮುರಿದಿದ್ದಾರೆ.
ಬಿಶನ್ ಸಿಂಗ್ 67 ಪಂದ್ಯಗಳಲ್ಲಿ 266 ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಆದರೆ ಜಡೇಜಾ 65 ಪಂದ್ಯಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ. ಜಡೇಜಾ 65 ಪಂದ್ಯಗಳಲ್ಲಿ 268 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದಾರೆ.