News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ದ.ಕ ಜಿಲ್ಲೆಯ ನಾಲ್ಕು ಮಂದಿಗೆ ಒಲಿದು ಬಂದ ರಾಷ್ಟ್ರಪತಿ ಭೇಟಿ ಅವಕಾಶ

Four persons from Dakshina Kannada district will be allowed to meet the President of India.
Photo Credit : News Kannada

ಮಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ಸಲುವಾಗಿ ದಿಲ್ಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ವಿವಿಧ ವರ್ಗಗಳ ಪುರುಷರು ಹಾಗೂ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಿಂದಲೂ ಹಲವು ಸಾಧಕರನ್ನು ಆಯ್ಕೆ ಮಾಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ.

ದ.ಕ. ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಮಂಗಳೂರಿನ ಮರಕಡದ ಎಂ. ಸುಂದರ, ಸಂಘಟನೆಯ ಸದಸ್ಯರಾದ ಕಂಕನಾಡಿಯ ರತ್ನಾ, ಕಿನ್ನಿಗೋಳಿಯ ಸುಪ್ರಿಯಾ ಮತ್ತು ಸಂಘಟನೆಯ ಖಜಾಂಚಿ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದ ನಾರ್ಣಕಜೆಯ ರಾಮಚಂದ್ರ ಆಯ್ಕೆಯಾಗಿದ್ದಾರೆ.

ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು, ದ.ಕ. ಕೊರಗರ ಜಿಲ್ಲಾ ಸಂಘದಿಂದ ಈ ಹೆಸರು ಸೂಚಿಸಲಾಗಿದೆ.

ಜೂನ್‌ 11ರಿಂದ 13ರ ವರೆಗೆ ದಿಲ್ಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು 11ರಂದು ರಾಷ್ಟ್ರಪತಿ ಭೇಟಿ ಮತ್ತು ಎರಡು ದಿನಗಳ ಕಾಲ ಹೊಸದಿಲ್ಲಿ ದರ್ಶನ ಇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು