News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ವೇದವ್ಯಾಸ್ ಗೆ ತೀವ್ರ ಸ್ಪರ್ಧೆ ನೀಡಲಿದ್ದಾರೆಯೇ ಡಾ. ಸುಮತಿ ಎಸ್ ಹೆಗ್ಡೆ

Will Dr Sumathi S Hegde give a tough competition to Vedavyas?
Photo Credit : R Bhat

ಮಂಗಳೂರು:  ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಗೆ ಈ‌ ಬಾರಿ ಪ್ರಬಲ ಪೈಪೋಟಿ ನೀಡಲು ಜನತಾದಳ ( ಜಾ) ಪಕ್ಷದಿಂದ ಕಣಕ್ಕೆ ಇಳಿದಿರುವ ಲಯನ್ಸ್ ಡಿಸ್ಟ್ರಿಕ್ಟ್ ಚೇರ್ಮೆನ್ , ದ.ಕ. ಜಿಲ್ಲಾ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಡಾ. ಸುಮತಿ ಎಸ್ ಹೆಗ್ಡೆ ಸಿದ್ಧರಾಗಿದ್ದು, ಪ್ರಬಲ ಪೈಪೋಟಿ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಸುಮತಿ ಹೆಗ್ಡೆ ಸ್ಪರ್ಧೆಗೆ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಸಿರು ನಿಶಾನೆ ತೋರಿದ್ದು‌ ಇವರ ಪಕ್ಷ ಸಂಘಟನೆ ಚಾತುರ್ಯಕ್ಕೆ ಫಿದಾ ಆಗಿದ್ದಾರೆ. ಡಾ.‌ಸುಮತಿ ಎಸ್ ಹೆಗ್ಡೆ ಸಾಮಾಜಿಕ  ಕ್ಷೇತ್ರದಲ್ಲಿ  ಸುಮಾರು 2020 ರಿಂದ‌ ( 4 ವರುಷಗಳಿಂದ) ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸಿ ಎಲ್ಲರ ಮನೆ ಮಾತಾಗಿದ್ದಾರೆ.

ಬಹುತೇಕ ಬಿಜೆಪಿಯ‌ ಮತಗಳನ್ನೇ ಸೆಳೆಯಬಲ್ಲ ಇವರಿಗೆ ಜಾತಿ ಮತ ಬೇಧ ಮರೆತು ಸರ್ವ ಜನರ  ಮತಗಳಿಕೆ ಸಾಮರ್ಥ್ಯವಿದೆ.   ಮನೆ‌ ಮನೆಗೆ ಭೇಟಿ ನೀಡಿದ‌ ಸಂದರ್ಭ ಬೇರೆ‌ ಪಕ್ಷದವರು‌ ( ನಾವು ಬಿಜೆಪಿ, ನಾವು ಕಾಂಗ್ತೆಸ್ ) ನಾವು ನಿಮ್ಮ ಪಕ್ಷ ನೋಡಿ ಮತ ಹಾಕುವುದಿಲ್ಲ. ನಿಮ್ಮ ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನಿಮಗೆ ವೋಟು ನೀಡುತ್ತೇವೆ ಎನ್ನುತ್ತಾರೆ. ಇದು ಜನರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ವೈಯಕ್ತಿಕ ವರ್ಚಸ್ಸು ಹೊಂದಿದ, ಜನರ ನಾಡಿಮಿಡಿತ ಅರಿತ ನಾಯಕಿ: ಸುಮತಿ ಅವರ ವೈಯಕ್ತಿಕ ವರ್ಚಸ್ಸು ವರ್ಕೌಟ್ ಆಗುತ್ತಿದ್ದು,‌‌ ವಿನಯ , ಆತ್ಮೀಯತೆ ಹಾಗೂ ಜನಸೇವೆಯ ಧ್ರಢ‌ ಸಂಕಲ್ಪ ಜನರನ್ನು ಆಕರ್ಷಿಸುತ್ತಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ವತಿಯಿಂದ  ಜನತಾ ಜಲಧಾರೆ‌ ಹಾಗೂ‌ ಪಂಚರತ್ನ ಯೋಜನೆಗಳ ವಾಹನ ಜಾಥಾ ಕೈಗೊಂಡು, ದ.ಕ.‌ಜಿಲ್ಲೆಯಲ್ಲಿ‌ ನೆಲೆಯಿಲ್ಲದ ಜೆಡಿಎಸ್  ಪಕ್ಷಕ್ಕೆ ಮರುಜೀವ ನೀಡಿದ್ದಾರೆ.   ಬೆಂಗರೆ ,‌ ಪಾಂಡೇಶ್ವರ ,‌ ಬಂದರ್, ಪಡೀಲ್ , ಜೆಪ್ಪು, ಬಜಾಲ್, ಬಿಕರ್ನಕಟ್ಟೆ, ಕಣ್ಣೂರು ಪ್ರದೇಶಗಳ  ಅಲ್ಪಸಂಖ್ಯಾತ ಮತಗಳ ಪ್ರಮಾಣ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆಯ ನಂತರ ಚುನಾವಣಾ ಕಣದ ನಿಜವಾದ ಚಿತ್ರಣ ಹೊರಬೀಳಲಿದೆ.‌

ರಾಷ್ಟ್ರೀಯ ಪಕ್ಷಗಳಿಗೆ ಸುಮತಿ ಸ್ಪರ್ಧೆ ಬಿಸಿತುಪ್ಪ: ರಾತ್ರಿ ಹಗಲೆನ್ನದೆ‌ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಜಯಗಳಿಸುವ ವಿಶ್ವಾಸ ಹೊಂದಿದ್ದಾರೆ. ಕೊನೆಕ್ಷಣದಲ್ಲಿ ವೀರ ಸೋಲು ಕಂಡರೂ  ದ.ಕ.‌ಜಿಲ್ಲಾ ಜೆಡಿಎಸ್ ನಾಯಕರಿಗೆ ಗೌರವ ತರುವುದರಲ್ಲಿ ಎರಡು ಮಾತಿಲ್ಲ.  ಈ‌ ಕ್ಷೇತ್ರದ ಶೇ 70 ರಷ್ಟು ಮಹಿಳೆಯರು ಈ ಬಾರಿ ಸುಮತಿ ಮೇಡಂ ಗೆ ಮತನೀಡಲು ನಿರ್ಧರ್ಸಿರುವುದೂ ಕುಡಾ‌ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿದೆ. ಒಟ್ಟಿನಲ್ಲಿ ಗ್ರೌಂಡ್ ರಿಯಾಲಿಟಿ ಪ್ರಕಾರ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮಂಗಳೂರು ದಕ್ಷಿಣದಲ್ಲಿ ಜೆಡಿಎಸ್ ಈ ಬಾರಿ ಪ್ರಬಲ ಪೈಪೋಟಿ ನೀಡುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು